ಶುಕ್ರವಾರ, ಅಕ್ಟೋಬರ್ 12, 2012

ಸೋಮವಾರ, ಮೇ 28, 2012

ಬೇಡಿಕೆ - ಪೂರೈಕೆ - ಅಡಿಕೆ ಬೆಳೆ

ಬೇಡಿಕೆ - ಪೂರೈಕೆ - ಅಡಿಕೆ ಬೆಳೆ

"ಯಾವುದೇ ಒಂದು ವಸ್ತುವಿನ ಬೆಲೆಯು ಬೇಡಿಕೆ ಮತ್ತು ಪೂರೈಕೆಯ ಸಿದ್ಧಾಂತವನ್ನ ಅವಲಂಭಿಸಿದೆ" ಅತಿ ಸರಳ ಅರ್ಥಶಾಸ್ತ್ರದ ನಿಯಮ. ಅಥವಾ ಸಾಮಾನ್ಯ ಜ್ಞಾನ.

ಈಗ ನಮ್ಮ ಅಡಿಕೆಯ ವಿಚಾರಕ್ಕೆ ಬನ್ನಿ........... ಅಡಿಕೆ ಒಂದು ತೋಟಗಾರಿಕಾ ಉತ್ಪನ್ನ ಮತ್ತು ಬಹು ವಾರ್ಷಿಕ ಬೆಳೆ...........

ಹಾಗಾದರೆ ಇದನ್ನ ಜಗತ್ತಿನ ಯಾವ ಯಾವ ದೇಶದಲ್ಲಿ ಬೆಳೆಯಲಾಗುತ್ತಿದೆ..?? ನಿಖರ ಮಾಹಿತಿ ನನಗು ಗೋತ್ತಿಲ್ಲ...ಇರಲಿ..!!!!

ಅಂತು ಇದು ತೋಟಗಾರಿಕಾ ಬೆಳೆಯಾದ ಕಾರಣ ಯಾವ ಯಾವ ದೇಶದಲ್ಲಿ ಇದನ್ನ ಬೆಳೆಯುತ್ತಿದ್ದಾರೆ ಎಂದು ಮಾಹಿತಿ ಕಲೆ ಹಾಕಲು ಬಹಳಷ್ಟು ಸಮಸ್ಯೇ ಆಗಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ..............


ಪೂರೈಕೆ:
ಮಳೆ-ಕೊಳೆ-ಬೆಳೆ- ಹೀಗೆ ಹ್ಯಾಗೆ ಲೆಕ್ಕ ತೆಗೆದರು ತೋಟಗಾರಿಕಾ ಬೆಳೆಯಾದ ಕಾರಣ ವಾರ್ಷಿಕ ಜಾಗತಿಕ ಉತ್ಪನ್ನವನ್ನ ಅಜಮಾಸು ಲೆಕ್ಕ ಹಾಕಬಹುದಲ್ಲವೆ...? ಈ ಅಂದಾಜಿಗೆ ತೀರಾ ವ್ಯತಿರಿಕ್ತವಾದ ಉತ್ಪನ್ನಮಟ್ಟವಂತು ಇರಲು ಸಾಧ್ಯವಿಲ್ಲವೆನೊ. ಎಕೆಂದರೆ ಎಕವಾರ್ಷಿಕ ಬೆಳೆಯಂತೆ ಇದ್ದಂಕ್ಕಿದ್ದಂತೆ ಯಾರೋ ಸೃಷ್ಟಿಸುವುದು ಸುಲಭವಲ್ಲ.


ಬೇಡಿಕೆ:
ಯಾರು ನಮ್ಮ ನಿಜವಾದ ಗ್ರಾಹಕರು.? ಗೋತ್ತಿಲ್ಲ.

ನಿಖರವಾಗಿ ನಾವು ನಮ್ಮ ಗ್ರಾಹಕರನ್ನ ಯಾರು ಎಂದು ಗುರುತಿಸದ ಹೊರತು ನಾವು ಯೇನೆ ಲಾಗಾ ಹಾಕಿದರು ಬೆಲೆ ಎರಿಳಿತ ಇದ್ದದ್ದೆ.....


ಗುಟುಕಾ ತಯಾರಿಗೆ ಎಷ್ಟು ಅಡಿಕೆ ಹೊಗುತ್ತೆ?
ತಾಂಬೂಲದ (ಪಾನ್) ಗೆ ಎಷ್ಟು ಹೊಗುತ್ತೆ?
ಮತ್ತೆ ಯೇನ್ ಯೇನ್ ಮಾಡತಾರೆ?
ಧಾರ್ಮಿಕ ಕಾರ್ಯಗಳಿಗೆ ಅವಕ್ಕೆ ಇವಕ್ಕೆ ಅಂತ ಎಷ್ಟು ಹೊಗುತ್ತೆ?


ನಮ್ಮ ರಾಜ್ಯದಲ್ಲಿ ಎಷ್ಟು ಖರ್ಚು ಆಗುತ್ತೆ?
ನಮ್ಮ ದೇಶದಲ್ಲಿ ಎಷ್ಟು ಖರ್ಚು ಆಗುತ್ತೆ?
ಹೊರ ದೇಶಕ್ಕೆ ಎಷ್ಟು ರಪ್ತು ಆಗುತ್ತೆ?

ಈ ಮೇಲಿನ ಪ್ರಶ್ನೇಗಳು ಕೇಳೊದು ಸುಲಭ ಉತ್ತರಾ ಕೋಡೊದು ಸುಲಭ ಅಲ್ಲ... ಅಲ್ವಾ!!! ಆದರೆ ಗಮನಿಸಿ ಉತ್ತರ  ಕೋಡೊದು ಅಸಾಧ್ಯವಂತು ಅಲ್ಲ.
ಈ ಪ್ರಶ್ನೆಗಳಿಗೆ ಉತ್ತರ ಕೋಡೊದು ಸ್ವಲ್ಪ ನಿಧಾನವಾದರು ಸರಿ ಪ್ರಯತ್ನದಿಂದ ಸಂಪಾದಿಸ ಬಹುದು.
ಇದು ಪರೀಕ್ಷೆ ಅಲ್ಲ ಸ್ವಾಮೀ ಪೇಪರ್ ಯಾರು ಮೂರು ತಾಸಿಗೆ ಕಸಿಯೊರಿಲ್ಲ ಸ್ವಲ್ಪ ನಿಧಾನವಾಗಲಿ ತೊಂದ್ರೇ ಇಲ್ಲ. ಒಮ್ಮೇ ಹಿಡಿತ ಸಿಕ್ಕಿದರೆ ಮುಗಿತು ಆಮೇಲೆ ವರ್ಷದ್ದು ವರ್ಷ ಮಾಹಿತಿ ಕಲೆ ಹಾಕಬಹುದು ಅತಿ ಸುಲಭದಲ್ಲಿ ಹಾಗೂ ಸರೀಯಾದ ಸಮಯಕ್ಕೆ..

ಮುಂದುವರೆಯುವುದು.................................




ಶನಿವಾರ, ಮೇ 26, 2012

ಅಡಿಕೆ ಮಾರುಕಟ್ಟೆ ಮತ್ತು ಅರ್ಥಶಾಸ್ತ್ರ

 ಅಡಿಕೆ ಮಾರುಕಟ್ಟೆ ಮತ್ತು ಅರ್ಥಶಾಸ್ತ್ರ

ಈ ವರ್ಷ ಅಡಿಕೆಗೆ ಬೆಲೆ ಇಲ್ಲ..!!!
ಈ ವರ್ಷ ಅಡಿಕೆಗೆ ಒಳ್ಳೆ ಬೆಲೆ ಬಂದಿದೆ...!!!
ಅಡಿಕೆ ಆಹಾರವಸ್ತು ಅಲ್ಲ ಇನ್ನು ಇದರ ಭವಿಷ್ಯ ಮುಗಿತು..!!!
ಇನ್ನೋಂದು ಸ್ವಲ್ಪದಿವಸ ಕಾದ್ರೇ ಚೋಲೋ ಬೆಲೆ ಬರುತ್ತೆ...!!!
ಅದ್ಯಾವದೋ ಗ್ಯಾಟ್ ಒಪ್ಪಂದ ಆಗಿದೆಯಂತೆ ಇನ್ನು ಅಡಿಕೆ ರೆಟ್ ಡೌನ್....!!!
ಇಷ್ಟದಿನಾ ರೆಟ್ ಬರುತ್ತೆ.....ಬರುತ್ತೆ ಹೆಳಿ ಕಾದಾಯ್ತು..... ಎಲ್ಲಾ ರೆಟ್ ಬರತ್ತಂತೆ ಅಂದ್ರು ನೋಡಿದ್ರೆ ಕೊಡೊ ಟೈಮ್ ನಲ್ಲಿ ರೆಟ್ ಡೌನ್....!!!
ಸರ್ಕಾರಾ ಬೆಂಬಲ ಬೆಲೆ ಘೋಷಣೆ ಮಾಡ ಬೇಕು....!!! ಸಾಲಾ ಮನ್ನಾ ಮಾಡ ಬೇಕು..!!! ಕಡೆ ಪಕ್ಷ ಬಡ್ಡಿನಾದ್ರು ಮನ್ನಾ ಮಾಡ ಬೇಕು..!!!


ಈ ಮೇಲಿನ ಯಾವುದಕ್ಕಾದರು ಆದಾರಗಳಿವೆಯಾ..?
ಅಥವಾ ನಮ್ಮಲ್ಲಿ ಎಷ್ಟು ಮಂದಿ ನಮ್ಮ ಅಡಿಕೆಯ ಬಗ್ಗೆ ಸಂಪೂರ್ಣ ತಿಳಿಯೊ ಪ್ರಯತ್ನಮಾಡಿದ್ದಾರೆ..?

ನಿಮ್ಮ ತೋಟದಲ್ಲಿ ಬೆಳೆದ ಅಡಿಕೆ ಕೊನೆಯದಾಗಿ ಯಾರು ಬಳಸುತ್ತಾರೆ...ನಿಮ್ಮ ನಿಜವಾದ ಗ್ರಾಹಕ ಯಾರು?? ನಿಮ್ಮ ಮನೆ ಬಾಗಿಲಿಗೆ ಬಂದು ಅಡಿಕೆ ಖರಿದಿ ಮಾಡೋ ದಲ್ಲಾಳಿಯಾ..?? ಅಥವಾ ನಿಮ್ಮ ಸಹಕಾರಿ ಸಂಘವಾ??? ಯಾರು??? ಎಷ್ಟು ಮಂದಿಗೆ ಗೋತ್ತು??

ಅಲ್ಲೆಲ್ಲೋ ಬೈಲು ಸೀಮೆಯ ಕಡೆ ಹೊಗುತ್ತಂತೆ...... ಉತ್ತರ ಭಾರತದ ಕಡೆ ಹೊಗುತ್ತಂತೆ.....ಪಾಕಿಸ್ತಾನಕ್ಕು ಹೊಗುತ್ತಂತೆ......ಬರಿ ಅಂತೆ ಕಂತೆ.........

ಕೋಖಾ ಅಡಿಕೆ ನೊಡಿದ್ದಿರಲ್ಲ ಅದಕ್ಕು ಬೆಲೆ ಕಟ್ಟಿ ಕೊಳ್ಳುತ್ತಾರೆ... ಕಪ್ಪು ಕಪ್ಪು ಹುಡಿಯಂತಾದ್ದು ಕೂಡ ಮಾರಟವಾಗುತ್ತೆ.......ಯೆನ್ ಮಾಡತಾರೆ ಇದನ್ನ??? ಅಡಿಕೆಗೆ ಬೆಲೆ ಇಲ್ಲ ಅಂತಿರಲ್ಲ ಹಾಗಾದರೆ ಯಾಕೆ ಇಲ್ಲ???

ಎಲ್ಲಿತನಕ ರೈತ ತನ್ನ ನಿಜವಾದ ಗ್ರಾಹಕ ಯಾರು ಅಂತ ತಿಳಿಯೊ ಪ್ರಯತ್ನ ಮಾಡುವದಿಲ್ಲವೊ ಅಲ್ಲಿಯವರೆಗೆ ಇದು ಹೀಗೆಯೆ...!!!

"ಅಡಿಕೆ ಭವಿಷ್ಯ ಮುಗಿತು...!!!" ಎನ್ ಸ್ವಾಮಿ ಎನು ಅಂತಾ ಕೇಟ್ಟದ್ದು ಇದೆ ಅಡಿಕೆಲಿ...??? ಯಾವ ಆದಾರದ ಮೇಲೆ ಈ ಸುಳ್ಳು ಸುದ್ದಿನಾ ಹಬ್ಬಿಸ್ತಿರಿ.??? ಯರಿದಾರೆ ಸ್ವಾಮಿ ಅಡಿಕೆ ತಿಂದು ಸತ್ತೋರು.???



ಈ ಬಗ್ಗೆ ಇನ್ನಷ್ಟು ಚರ್ಚಿಸುತ್ತೇನೆ. ಮುಂದಿನ ಭಾಗಗಳಲ್ಲಿ.... ಸಾಧ್ಯವಾದಷ್ಟು ವಿವರವಾಗಿ... ನಿಮ್ಮ ಸಹಕಾರ ಬೇಕು.

ಶುಕ್ರವಾರ, ಮೇ 25, 2012

ನೌಕರಿ ಚಾಕರಿಯೆ ಲೇಸು ಈ ವ್ಯವಹಾರ ಕೃಷಿಯೆಲ್ಲಾ ಬರಿ ಲಾಸೂ...!!

ಭಾರತಕ್ಕೆ ಸ್ವತಂತ್ರ ಬಂದು ೬೪ ವರ್ಷಗಳಾದವು, ಸ್ವತಂತ್ರ ನಂತರ ಹಾಗೂ ಪೂರ್ವದಲ್ಲಿ ಕೂಡ ನಮ್ಮ ದೇಶದಲ್ಲಿ ನಾನಾ ರೀತಿಯ ವಿದ್ಯಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ರೈತರು ನಮ್ಮ ದೇಶದ ಬೆನ್ನುಲುಬಾಗಿದ್ದಾರೆ. ಆದರೆ ಈ ಬೆನ್ನುಲುಬುಗಳನ್ನು ಗಟ್ಟಿಗೊಳಿಸಲು ಯಾವುದೇ ಸರಿಯಾದ ಶಿಕ್ಷಣ ಎಂಬ ಆಸರೆಯನ್ನ ಈವರೆಗೆ ಒದಗಿಸಲಾಗಿಲ್ಲ. ಅಂದರೆ, ನಮ್ಮ ದೇಶದಲ್ಲಿ ಸಾಕಷ್ಟು ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ವರ್ಷ ಸಾಕಷ್ಟು ಪ್ರತಿಭಾವಂತರು ಈ ಕ್ಷೇತ್ರದಲ್ಲಿ ಉನ್ನತ ಪದವಿಗಳನ್ನು ಗಳಿಸಿ ಹೊರಬರುತ್ತಿದ್ದರು, ಇವರಲ್ಲಿ ಹೆಚ್ಚಿನವರಾರು ರೈತಾಪಿ ಬದುಕನ್ನು ಜೀವನಕ್ಕಾಸರೆಯಾಗಿ ಮಾಡಿಕೊಂಡವರಿಲ್ಲ. ಹೀಗೆ ಕಲಿತು ಬಂದ ಹೆಚ್ಚಿನವರು ನಾನಾ ರೀತಿಯ ಉದ್ಯೋಗಗಳನ್ನು ಅರಸಿಕೊಂಡು ನೌಕರಿಯನ್ನು ಹಿಡಿದವರೆ ಹೊರತು ರೈತಾಪಿ ಬದುಕನ್ನು ಮಾಡುತ್ತಿರುವವರು ತೀರಾ ಕಡಿಮೆ. ಹೀಗಿರುವಾಗ, ಕೃಷಿಗೆ ಸಂಭಂದಿಸಿದ ವಿಜ್ಞಾನ ಹಾಗೂ ತಂತ್ರಜ್ಞಾನಗಳು ಹೆಚ್ಚಿನ ಪ್ರಮಾಣದಲ್ಲಿ ನೈಜ್ಯ ರೈತರಿಂದ ದೂರವಾಗಿಯೆ ಉಳಿದಿದೆ. ಇದೇ ರೀತಿ ವ್ಯವಹಾರಿಕ ಕ್ಷೇತ್ರದಲ್ಲಿ ಕೂಡ ಸ್ವಲ್ಪ ಮಟ್ಟಿಗೆ ಇಂತಹುದೆ ಬೆಳವಣಿಗೆಯನ್ನು ಕಾಣಬಹುದಾಗಿದೆ. ಹೆಚ್ಚಿನ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ವಿದ್ಯಾರ್ಥಿಗಳು ವ್ಯವಹಾರದಿಂದ ದೂರವೇ ಉಳಿದು ನೌಕರಿಯನ್ನೇ ನೆಚ್ಚಿಕೊಂಡಿದ್ದಾರೆ. ಯುವಜನಾಂದದಲ್ಲಿ ಉದ್ಯಮ ಶೀಲತೆ ಮರೆಯಾಗುತ್ತಲಿದೆ ಇದು ಆತಂಕಕಾರಿ ಬೆಳವಣಿಗೆ.

            ಪ್ರತೀ ಕ್ಷೇತ್ರದಲ್ಲಿಯೂ ಆಯಾ ಕ್ಷೇತ್ರಕ್ಕೆ ಸಂಭಂದ ಪಟ್ಟ ಶಿಕ್ಷಣವನ್ನು ಹೊಂದಿದವರು ಆ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿರುತ್ತಾರೆ. ಒಂದು ಹಂತದ ಶಿಕ್ಷಣ ಪ್ರತೀ ಕ್ಷೇತ್ರಕ್ಕೂ ಇಂದಿನ ದಿನಮಾನದ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಚಿಂತನೆಯನ್ನು ಹರಿ ಬಿಟ್ಟಾಗ ನಮ್ಮ ಗ್ರಾಮೀಣ ಭಾಗದ ರೈತರಿಗೆ ಕೆಲ ಹಂತದ ಆಧುನಿಕ ಕೃಷಿ ವಿಜ್ಞಾನ, ತಂತ್ರಜ್ಞಾನದ ಶಿಕ್ಷಣವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಅಗತ್ಯತೆಯಿದೆ.

              ಗ್ರಾಮೀಣ ಭಾಗದ ಹೆಚ್ಚಿನ ಯುವ ಪ್ರತಿಭೆಗಳು ಇಂದು ಜೀವನೋಪಾಯಕ್ಕಾಗಿ ಪಟ್ಟಣವನ್ನೇ ಅವಲಂಬಿಸಬೇಕಾದ ಒಂದು ರೀತಿಯ ದುರಂತ ಆರ್ಥಿಕ ಬೆಳವಣಿಗೆಯತ್ತ ನಮ್ಮ ದೇಶ ಸಾಗುತ್ತಿದೆ. ಗೊತ್ತು ಗುರಿಯೇ ಇಲ್ಲದೆ ನಗರಗಳು ಎತ್ತೆತ್ತಲೋ ಬೆಳೆಯುತ್ತವೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸೆಂಬ ನಾಣ್ಣುಡಿಯನ್ನು ನಾವೆಲ್ಲರು ಕೇಳಿಯೇ ಇದ್ದೇವೆ. ಆದರೆ ಇಂದಿನ ಯುವಜನಾಂಗ ಇದನ್ನು ಸ್ವಲ್ಪ ತಿರುಚಿ ವಾಸ್ತವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿ ಈ ನಾಣ್ಣುಡಿಯನ್ನು ಹೀಗೆ ಹೇಳುತ್ತಿರುವದನ್ನು ನಾವೆಲ್ಲಾ ಕೇಳಿರುತ್ತೇವೆ, ಅದೇನೆಂದರೆ, ಕೋಟಿ ವಿದ್ಯೆಗಳಲ್ಲೆಲ್ಲ ಮೇಟಿ ವಿದ್ಯೆಯೇ ಲಾಸೂ!!.

       ರೈತರಿಗೆ, ರೈತಾಪಿ ಬದುಕಿಗೆ ಇನ್ನು ಭವಿಷ್ಯವಿಲ್ಲ. ಏನಾದರು ಬೇರೆ ಉದ್ಯೋಗ (ಮುಖ್ಯವಾಗಿ ನೌಕರಿ) ಮಾಡುವದು ಲೇಸು ಎಂಬುದು ಪ್ರತಿ ರೈತ ಕುಟುಂಬದಲ್ಲಿ ರೈತರು ತಮ್ಮ ಮಕ್ಕಳಿಗೆ ಹೇಳುತ್ತಿರುವುದು ನಿತ್ಯದ ಕಿವಿಮಾತಾಗಿದೆ. ವಾಸ್ತವದಲ್ಲಿ ಕೂಡ ಹೆಚ್ಚಿನ ರೈತರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಇಂದು ಶೋಚನೀಯವಾಗಿದೆ. ಬೆಳೆದ ಬೆಳೆಗೆ ಸೂಕ್ತ ದರ ದೊರೆಯುತ್ತಿಲ್ಲ. ಮಾರುಕಟ್ಟೆ ಅಗತ್ಯತೆಯನ್ನ ಅರಿಯುವ ಚಾಕಚಕ್ಯತೆ ನಮ್ಮ ರೈತರಲ್ಲಿ ಇಲ್ಲವಾದ ಕಾರಣ ಅತೀ ಶ್ರಮದಿಂದ ಬೆಳೆದ ಬೆಳೆಯನ್ನು ಕೂಡಾ ಅಸಲಿಗೆ ಕಡಿಮೆಯಾಗಿ ನಷ್ಟದಲ್ಲಿ ಮಾರಿದುದು ಅಥವಾ ಗಿರಾಕಿಗಳೇ ದೊರೆಯದೆ ಬೆಳೆದ ಬೆಳಗಳನ್ನು ಕೇಳುವವರೇ ಇಲ್ಲದಂತ ಅದೇಷ್ಟೋ ಸಂದರ್ಭಗಳನ್ನ ನಮ್ಮ ರೈತರು ಎದುರಿಸಿದ್ದಾರೆ. ಇದು ಒಂದು ಕಡೆಯಾದರೆ, ಅದೆಷ್ಟೋ ಸಂದರ್ಭದಲ್ಲಿ ಸೂಕ್ತವಾದ ಆಧುನಿಕ ಕೃಷಿ ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಬೆಳೆ ಬೆಳೆಯುವ ಹಂತದಲ್ಲಿ ಕೆಲ ಅನಗತ್ಯ ಶ್ರಮಗಳನ್ನು ಪಡುತ್ತಿರುವದಲ್ಲದೆ ಪಟ್ಟ ಶ್ರಮಕ್ಕೆ ಸೂಕ್ತ ಇಳುವರಿಯನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹೀಗೆ ಪ್ರತಿ ಹಂತದಲ್ಲಿ ರೈತರು ಪಡುತ್ತಿರುವ ಕಷ್ಟಕ್ಕೆ ಒಂದಿಲ್ಲೊಂದು ವಿಧದಲ್ಲಿ ಸೂಕ್ತವಾದ ಶಿಕ್ಷಣದ ಹಾಗೂ ನಿರಂತರ ಮಾರ್ಗದರ್ಶನದ ಕೊರತೆಯೇ ಕಾರಣವೇನೋ ಎಂದು ಬಹು ಸಂದರ್ಭದಲ್ಲಿ ಅನಿಸಿದ್ದುಂಟು.

ಕೃಷೀ ಸಂಪರ್ಕ ಕೇಂದ್ರ, ರೈತ ಸಹಾಯ ಕೇಂದ್ರದಂತಹ ವಿವಿಧ ರೀತಿಯ ವ್ಯವಸ್ತೆಗಳು ಕಾರ್ಯನಿರ್ವಹಿಸುತ್ತಿದ್ದರು, ಇವುಗಳು ರೈತನ ಸಮಸ್ಯೆಗೆ ನಿಜವಾದ ಉತ್ತರವೆಂದು ಒಪ್ಪುವುದು ಕಷ್ಟ. ಕಾರಣವೆನೆಂದರೆ ಒಂದು ಸಣ್ಣ ಉದಾಹರಣೆಯನ್ನ ತೆಗೆದುಕೊಂಡರೆ ಒಬ್ಬ ವ್ಯಕ್ತಿಗೆ ಯಾವುದೊ ಕಾನುನೂ ತೊಡಕು ಎದುರಾಯಿತು ಎಂದು ತಿಳಿಯಿರಿ, ಆತ ವಕೀಲರಲ್ಲಿ ಹೋಗಿ ಅವರಲ್ಲಿ ಸಲಹೆ ಪಡೆದು ತನ್ನ ಸಮಸ್ಯೆಯನ್ನ ಬಗೆ ಹರಿಸಿ ಕೊಳ್ಳುತ್ತಾನೆ. ಹೀಗೆಂದು ಆತನು ವಕೀಲರ ಸಲಹೆಯಿಂದ ಉತ್ತಮ ಕಾನೂನು ಜ್ಞಾನವನ್ನು ಪಡೆದಂತಾಯಿತೆ? ಇಲ್ಲ, ಅಲ್ಲವೆ. ಆತನ ಅದೊಂದು ಸಮಸ್ಯೆ ಬಗೆಹರಿಯಿತು ಅಷ್ಟೆ. ಅದೇ ವ್ಯಕ್ತಿಗೆ ಮತ್ತೊಂದು ಕಾನೂನಿನ ಸಮಸ್ಯೆ ಎದುರಾದಾಗ ಆತ ಮತ್ತೆ ವಕೀಲರ ಮೋರೆಯನ್ನೆ ಹೊಗ ಬೇಕಾಗುತ್ತದೆ.  ಈ ಹಿಂದಿನ ನಿದರ್ಶನವನ್ನು ನೀಡುವ ಮೂಲಕ ನಾನು ಹೇಳಲು ಬಯಸುತ್ತಿರುವುದು ಇಷ್ಟೆ, ಕಾನೂನಿನ ಸಮಸ್ಯೆಯಂತಹ ವಿಚಾರಗಳು ಎಲ್ಲೋ ಕೆಲವು ವ್ಯಕ್ತಿಗಳಿಗೆ ಜೀವಮಾನದಲ್ಲಿ ಒಂದೆರಡು ಬಾರಿ ಬಂದಿತು. ಆದರೆ ರೈತಾಪಿಯನ್ನೆ ವೃತ್ತಿಯನ್ನಾಗಿಸಿ ಕೊಂಡಾತನಿಗೆ ದಿನದಲ್ಲಿಯೇ ಅದೆಷ್ಟೊ ಪ್ರಶ್ನೆಗಳು ಉದ್ಭವಿಸುವ ಸಂದರ್ಭಗಳಿವೆ. ಪ್ರತಿಯೊಂದು ಸಮಸ್ಯೆಯನ್ನು ಆತ ಸಲಹೆ ಪಡೆದು ಬಗೆಹರಿಸಿ ಕೊಳ್ಳಲು ವಾಸ್ತವದಲ್ಲಿ ಸಾಧ್ಯವಿಲ್ಲ ಮತ್ತು ಕೃಷಿ ತಜ್ಞರು ನೀಡಿದ ಸಲಹೆಯನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದಂತಹ ಸಂದರ್ಭಗಳು ಕೂಡ ಇವೆ. ಇದಕ್ಕೆ ಕಾರಣ ರೈತರಲ್ಲಿ ಈ ಬಗ್ಗೆ ಮೂಲ ಶಿಕ್ಷಣವಿಲ್ಲದಿರುವುದೆ ಆಗಿದೆ.

           ಕೃಷಿಕರಲ್ಲಿ ವೃತ್ತಿಪರತೆಯ ಅರಿವಿನ ಅವಶ್ಯಕತೆ ಇದೆ. ಎಲ್ಲ ವೃತ್ತಿಯಂತೆ ರೈತವೃತ್ತಿಯೂ ಕೂಡ ಹೆಮ್ಮೆಯ ವೃತ್ತಿಯಾಗುವ ಅವಶ್ಯಕತೆಯಿದೆ, ಇದು ಹೀಗಾಗ ಬೇಕಾದರೆ ಕೃಷಿಯೂ ಒಂದು ಲಾಭದಾಯಕ ವೃತ್ತಿಯಾಗಬೇಕು. ಕೃಷಿ ವಿಧಾನಗಳನ್ನು ಇಂದಿನ ಆಧುನಿಕತೆಯ ನೆಲಗಟ್ಟಿನಲ್ಲಿ ಸಂಪೂರ್ಣ ಪರಾಮರ್ಶೆ ಮಾಡಿ ಸಾಂಪ್ರದಾಯಿಕವಾದ ಸತ್ವಪೂರ್ಣ ಅಂಶಗಳನ್ನು ಉಳಿಸಿಕೊಂಡು ಕೆಲ ಅನಗತ್ಯವಾದ ಅವೈಜ್ಞಾನಿಕ ಅಸತ್ವಪೂರ್ಣ ಕ್ರಮಗಳನ್ನು ಬಿಟ್ಟು, ಲಾಭ ಹಾಗೂ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾಗಿದೆ. ಈ ಎಲ್ಲವೂ ಸಾಕಾರವಾಗಲು ಕೃಷಿಕರಿಗೆ ಕೃಷಿ ತಂತ್ರಜ್ಞಾನದ ಶಿಕ್ಷಣವನ್ನು ಒದಗಿಸುವುದು ಮೂಲಾವಶ್ಯಕತೆಯಾಗಿದೆ.

              ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯು ರೈತ ಮಟ್ಟದಲ್ಲಿಯೆ ಆಗಬೇಕು. ಹಾಗಾದರೆ ಏನಿದು ಮೌಲ್ಯವರ್ಧನೆ? ನಮ್ಮ ರೈತರ ಕೃಷಿ ಉತ್ಫನ್ನಗಳು ಕೆಲ ಸಂಸ್ಕರಣಾ ವಿಧಾನಗಳ ಮೂಲಕ ಸಂಸ್ಕರಿಸಿ, ಸಂಸ್ಕರಣೆಯ ಹಂತದಲ್ಲಿ ಕೆಲವು ಉತ್ಪನ್ನಗಳು ರೂಪಾಂತರಗೊಂಡು, ಕೆಲವು ರೂಪಾಂತರಗೊಳ್ಳದೆ ಹೊರಬಂದು ನಂತರ ಅದಕ್ಕೂಂದು ಆಧುನಿಕತೆಯ ಚಂದದ ಅಂಗಿಯನ್ನ ತೊಡಿಸಿ ಗ್ರಾಹನ ಮುಂದೆ ನಿಲ್ಲಿಸಿ ಅನಾಯಾಸವಾಗಿ ಹೆಚ್ಚಿನ ಲಾಭವನ್ನ ದೊಚುವುದು ಎಂದು ವ್ಯಾಕ್ಯಾನಿಸಿದರು ಯಾರು ನನ್ನನ್ನು ದೂರಲಿಕ್ಕಿಲ್ಲ. ಹೀಗೆ ಈ ಮೌಲ್ಯವರ್ಧನೆಯು ಪ್ರತಿ ಕೃಷಿ ಉತ್ಪನ್ನಗಳಿಗೂ ವಿಭಿನ್ನವಾಗಿರುತ್ತವೆ. ಆದರೆ ಸ್ವಲ್ಪ ಮಟ್ಟದ ತರಬೇತಿ ದೊರೆತರೆ ಲಿಲಾಜಾಲವಾಗಿ ಕರಗತ ಮಾಡಿಕೊಳ್ಳಬಹುದಾಗಿದೆ. ಹೀಗೆ ಮೌಲ್ಯವರ್ಧನೆಯನ್ನು ರೈತ ಮಟ್ಟದಲ್ಲಿ ಮಾಡುವ ಮೂಲಕ ರೈತಾಪಿ ಬದುಕು ನಿಜವಾಗಿಯು ಲಾಭದಾಯಕ ವಾಗುವದಲ್ಲದೆ ಹೆಮ್ಮೆಯ ವೃತ್ತಿಯಾಗುವದರಲ್ಲಿ ನಿಸ್ಸಂದೆಹ.

      ಈ ಮೇಲೆ ಪ್ರಸ್ತಾಪಿಸಿದಂತೆ ವ್ಯವಹಾರವು ಕೂಡ ಕೃಷಿಯಂತೆ ವಿಧ್ಯಾವಂತರಿಂದ ಸ್ವಲ್ಪ ಮಟ್ಟಿಗೆ ದೂರವೆ ಹೊರಟಿದೆ, ವಿಧ್ಯಾವಂತರಲ್ಲಿ ಹೆಚ್ಚಿನವರಾರು ಸ್ವಉದ್ಯೋಗಕ್ಕೆ ಮನಸ್ಸು ಮಾಡುತ್ತಿಲ್ಲ ನಮ್ಮಂತಹ ಕಲಿತವರಿಗೆ ನೌಕರಿ ಚಾಕರಿಯೆ ಲೇಸು ಈ ವ್ಯವಹಾರ ಕೃಷಿಯೆಲ್ಲಾ ಬರಿ ಲಾಸೂ....!!! ಎಂಬ ಹೊಸ ಗಾದೆಯನ್ನೆ ಸೃಷ್ಠಿಸುತ್ತಿದ್ದಾರೆ. ಆದರೆ ಅದೆಷ್ಟೋಮಂದಿ ಸೂಕ್ತ ಶಿಕ್ಷಣದ ಆಸರೆಯಿಂದವಂಚಿತರಾದವರೂ ಸಹ ಆತ್ಮಬಲದಿಂದ ಗಟ್ಟಿಗರು ಅತೀವ ಶ್ರಮಪಟ್ಟು ವ್ಯವಹಾರ ಸಂಸ್ಥೆಗಳನ್ನು ಸ್ಥಾಪಿಸಿ ಅದೆಷ್ಟೊ ಮಂದಿ ಈ ವಿದ್ಯಾವಂತ ಮಹಾಪ್ರಭುಗಳಗೆ ಜೀವನೋಪಾಯವನ್ನ ಕಲ್ಪಿಸಿಕೊಟ್ಟಿದ್ದಾರೆ....!!. ಆದರೆ ಇಂದಿನ ವಾತಾವರಣದಲ್ಲಿ ಸ್ವಉದ್ಯೂಗವನ್ನ ಆರಂಭಿಸಬೇಕೆನ್ನುವವರಿಗೆ ಸೂಕ್ತವಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಭಾಗ್ಯ ಸರಿಯಾಗಿ ಲಭಿಸುತ್ತಿಲ್ಲ. ಈ ಮೂಲಕ ಚಿಗುರಿನ ಹಂತದಲ್ಲಿಯೆ ಹೆಮ್ಮರವನ್ನ ಉರುಳಿಸಿದ ಹಾಗೆ ಆಗುತ್ತಿದೆಯೆನೊ. ವ್ಯವಹಾರವನ್ನ ಆರಂಭಿಸಲು ನಾನಾ ರೀತಿಯ ಕಾಗದ-ಪತ್ರ ಹಾಗೂ ಕಾನೂನಿನ ತೊಡಕುಗಳಿವೆ ಮತ್ತು ಪ್ರತಿ ಹಂತದಲ್ಲೂ ಕಾಣಿಕೆಯ ಸಮರ್ಪಣೆಯಾಗದ ವಿನಃ ಕಾರ್ಯವಾಗದು. ಹೀಗಿರುವಾಗ ಯಾರು ತಾನೆ ಸ್ವಉದ್ಯೋಗಕ್ಕೆ ಮನಸ್ಸು ಮಾಡುತ್ತಾರೆ ನೀವೆ ಹೇಳಿ. ಇನ್ನು ನಮ್ಮ ಕೈಗಾರಿಕಾಭಿವೃದ್ಧಿ ಇಲಾಖೆಗಳು ಇಂದೂ ಕೂಡ ಬಹಳ ಹಿಂದಿನ ಕಾಲದ್ದೆ ಆದ ವಿಧಾನಗಳನ್ನು ಭೋದಿಸುತ್ತಲಿವೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಹಾಗೂ ಹೊಸ ವಿಧದ ಕೈಗಾರಿಕಾ ಅವಕಾಶವನ್ನು ಯುವ ಆಸಕ್ತರಲ್ಲಿ ತೆರೆದಿಡುವಲ್ಲಿ ವಿಫಲವಾಗಿವೆ.

ಈ ಎಲ್ಲಾ ಸಮಸ್ಯೆಗಳಿಗೆ ಸರಿಯಾದ ಶಿಕ್ಷಣಾಸ್ತ್ರವನ್ನ ಪ್ರಯೋಗಿಸದ ಹೊರತು ಸಮಸ್ಯೆ ಬಗೆಹರಿಯುವ ಯಾವುದೇ ಗುಣಲಕ್ಷಣಗಳು ಗೋಚರವಾಗುತ್ತಿಲ್ಲ. ಇದಕ್ಕೆ ಉದಾಹರಣೆಯೆಂದರೆ ಕೆಲ ಆಸಕ್ತರು ಸೇರಿ ನೆಡೆಸಿದ ಚಿಕ್ಕಸಮಯದ ಪುಷ್ಪಕೃಷಿ, ಜೇನುಕೃಷಿ ಹೀಗೆ ಕೆಲ ತರಬೆತಿ ಪಡೆದು ಬಂದವರು ಮೊ೦ದಲಿಗಿಂತಲು ಹೆಚ್ಚು ಆಯಾ ಬೆಳೆಗಳಲ್ಲಿ ಆ ತರಬೇತಿ ಕಾರ್ಯಕ್ರಮದ ಪ್ರಭಾವವಿರುವವರೆಗೆ ತೊಡಗಿಕೊಂಡಿದ್ದನ್ನು ಕಣ್ಣಾರೆ ಕಂಡಿದ್ದೆನೆ. ಆದರೆ ಇಂತಹ ಕೃಷಿ ತರಬೇತಿಗಳಿಗೆ ಹಾಜರಾಗುವ ಅವಕಾಶ ನಮ್ಮ ಎಲ್ಲಾ ರೈತರಿಗು ಲಭ್ಯವಾಗುತ್ತಿಲ್ಲ. ಕಾರಣ ಮುಖ್ಯವಾಗಿ ತರಬೇತಿಯ ಸ್ಥಳ ಮತ್ತು ಪಾಲ್ಗೊಳ್ಳುವ ಜನರ ಸಂಖ್ಯೆಯ ಗರಿಷ್ಠ ಮಿತಿ ಮುಗಿದಿರುವುದು.

ಪ್ರತಿ ಗ್ರಾಮದಲ್ಲಿ(ಗ್ರಾಮಪಂಚಾಯತಿ ಕ್ಷೇತ್ರ) ಒಂದು ಇಂತಹ ವಿಧ್ಯಾಸಂಸ್ಥೆಯ ಅವಶ್ಯಕತೆ ಇದೆ. ಈ ವಿಧ್ಯಾ ಸಂಸ್ಥೆಗಳು ಕೃಷಿಕರಿಗೆ ಹಾಗೂ ಕೃಷಿಯಲ್ಲಿ ತೊಡಗಿಕೊಳ್ಳಲು ಆಸಕ್ತಿಯಿರುವವರಿಗೆ, ವ್ಯವಹಾರದಲ್ಲಿ ತೊಡಗಲು ಬಯಸುವವರಿಗೆ ಕಾಲದ ಅವಶ್ಯಕತೆಯನ್ನು ಅರಿತು ಉತ್ತಮ ಶಿಕ್ಷಣವನ್ನು ಒದಗಿಸುವಂತಾಗ ಬೇಕು. ಈ ವಿಧ್ಯಾಸಂಸ್ಥೆಗಳು ಬರಿ ವಿಧ್ಯಾಕೆಂದ್ರವಾಗಿರದೆ ಸರ್ಕಾರ ಹಾಗೂ ರೈತರ ನಡುವಿನ ನೇರ ಸಂಪರ್ಕವಾಹಿನಿಯಾಗಬೇಕು. ಕಡ್ಡಾಯವಾಗಿ ಪ್ರತಿರೈತನು ಸಹ ವಾರ್ಷಿಕ ನಿಗದಿತ ಅವಧಿಗಳ ಪಾಠಕ್ಕೆ ಹಜಾರಾಗಲೆ ಬೇಕು ಮತ್ತು ಆತನ ಹಾಜಾರಾತಿಯ ಆಧಾರದ ಮೇಲೆ ಆತನಿಗೆ ಸರ್ಕಾರ ನೀಡುವ ಸಹಾಯ ಧನ ಇತ್ಯಾದಿಗಳು ಆಧರಿಸಿರಬೇಕು. ಈ ವಿಧ್ಯಾಸಂಸ್ಥೆಯಲ್ಲಿ ನಿರಂತರ ಪಾಠ ಪ್ರವಚನಗಳು ನೆಡೆಯಬೇಕು ಜಗತ್ತಿನಾದ್ಯಂತ ದೊರೆಯುವ ಹೊಸ ವಿಚಾರಗಳು ಬಿಸಿಯಾರುವದೊರೊಳಗೆ ನಮ್ಮ ರೈತರನ್ನು ಈ ಮೂಲಕ ಸೇರಬೇಕು. ನಿರಂತರ ಸಂಶೋಧನೆಗಳು ಸಾಧನೆಗಳು ಈ ಕೆಂದ್ರದ ಮೂಲಕ ನೆಡೆಯಬೇಕು.

ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ, ಪುಷ್ಪಕೃಷಿ, ಜೇನುಕೃಷಿ, ಅರಣ್ಯ ಕೃಷಿ, ವ್ಯವಹಾರ, ಸ್ವಉದ್ಯೋಗ ಇತ್ಯಾದಿ ಇತ್ಯಾದಿ ಹೀಗೆ ಪ್ರತಿಯೊಂದು ವಿಚಾರಗಳಲ್ಲಿಯೂ ಆಯಾ ಪ್ರದೇಶಕ್ಕನುಗುಣವಾಗಿ ಶಿಕ್ಷಣವನ್ನು ಒದಗಿಸಬೇಕು. ಯುವಜನಾಂಗಕ್ಕೆ ಅನುಕೂಲವಾಗುವಂತೆ ಒಂದು ಅಥವಾ ಎರಡು ವರ್ಷ ಅವಧಿಯ ಕೃಷಿ ಹಾಗೂ ವ್ಯವಹಾರ ಅಧ್ಯಯನದ ಕೋರ್ಸ ಆರಂಭಿಸಿ ಯುವಜನಾಂಗಕ್ಕೆ ಬಧ್ರಬುನಾದಿಯನ್ನು ಹಾಕಿ ಕೊಡಬೇಕು. ಮಾರುಕಟ್ಟೆ ಚಾಕಚಕ್ಯತೆ, ಮೌಲ್ಯವರ್ಧನೆ ಮೊದಲಾದವುಗಳು ಈ ಕೋರ್ಸನ ಭಾಗವಾಗಿರಬೇಕು. ಈ ಮೂಲಕ ಕೃಷಿಯನ್ನು ಹೆಮ್ಮೆಯ ವೃತ್ತಿಯನ್ನಗಿಸಬೇಕು.

ನೌಕರಿ ಚಾಕರಿಯೆ ಲೇಸು ಈ ಕೃಷಿ-ವ್ಯವಹಾರವೆಲ್ಲಾ ಬರಿ ಲಾಸೂ ಎಂದು ಗೊಣಗಿ ಪಟ್ಟಣ ಹತ್ತಿ ಒಡುವವರು ಗ್ರಾಮಿಣ ಭಾಗದತ್ತ ಮುಖಮಾಡುವಂತಾಗಬೇಕು. ಇವೆಲ್ಲವೂ ಉತ್ತಮ ಆರ್ಧಿಕತೆಯನ್ನು ಗಮನದಲ್ಲಿಟ್ಟುಕೊಂಡ ಸದಾಶಯಗಳು. ಅತಿಯಾದ ನಗರಿಕರಣ ಮತ್ತು ಯುವಜನಾಂಗದಲ್ಲಿ ಔಧ್ಯಮಿಕತೆ ಮರೆಯಾಗುತ್ತಿರುವುದು ನಿಜಕ್ಕೂ ಉತ್ತಮ ಆರ್ಥಿಕತೆಯ ಬೆಳವಣಿಗೆಯ ಲಕ್ಷಣವಲ್ಲ. ಕಾರಣ ಇವಕ್ಕೆ ಕಡಿವಾಣ ಹಾಕುವ ಮೂಲಕ ದೇಶದ ಆರ್ಧಿಕತೆಗೆ ಉತ್ತಮ ಭದ್ರಬುನಾದಿಯನ್ನು ಹಾಕಬೇಕಿದೆ.
****