ಗುರುವಾರ, ಸೆಪ್ಟೆಂಬರ್ 15, 2011

ಸಂಕ್ಷಿಪ್ತ ಮಾಹಿತಿ ಪುಸ್ತಕ

||ಶ್ರೀ ಕುಲದೇವತಾ ಪ್ರಸನ್ನ||

ಆದಾಯ ತೆರಿಗೆ

ಕರ್ನಾಟಕ ಮೌಲ್ಯ ವರ್ಧಿತ ತೆರಿಗೆ

ಮತ್ತು

ವಾರ್ಷಿಕ ಲೆಕ್ಕ-ಪತ್ರ ನಿರ್ವಹಣೆ

ಸಂಕ್ಷಿಪ್ತ ಮಾಹಿತಿ ಪುಸ್ತಕ

ಶ್ರೀಕೃಷ್ಣ ಲ ಹೆಗಡೆ ಉಳ್ಳಾನೆ

ಬಿದ್ರಕಾನ್ ಸಿದ್ದಾಪುರ

ಉತ್ತರ ಕನ್ನಡ

shrikrishnaullane@gmail.com

ಮೊದಲ ಮಾತು

ನಮ್ಮ ದಿನನಿತ್ಯದ ವ್ಯವಹಾರಿಕ ಜೀವದಲ್ಲಿ ನಮಗೆ ಅನ್ವಯವಾಗುವ ಕಾನೂನಿನ ಬಗ್ಗೆ ನಮಗೆ ಬಹಳಷ್ಟು ಅನುಮಾನಗಳು ಮತ್ತು ಕುತೂಹಲಗಳು ಇರುತ್ತವೆ, ಮತ್ತು ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಈ ಕಾನೂನಿನ ಬಗ್ಗೆ ತಿಳುವಳಿಕೆ ಮತ್ತು ಅದರ ಪರಿಪಾಲನೆ ನಮ್ಮ ಕರ್ತವ್ಯದ ಒಂದು ಪ್ರಮುಖ ಭಾಗವಾಗಿರುತ್ತದೆ.

ಅದೆಷ್ಟೊ ಸಂದರ್ಭಗಳಲ್ಲಿ ಕಾನೂನಿನ ತಿಳುವಳಿಕೆಯ ಕೊರತೆ ಮತ್ತು ಕೆಲವು ತಪ್ಪು ಗ್ರಹಿಕೆಗಳು ನಮ್ಮನ್ನು ಅನಾವಶ್ಯಕವಾಗಿ ಕಾನೂನಿನ ದೃಷ್ಟಿಯಲ್ಲಿ ತಪ್ಪುಗಾರರನ್ನಾಗಿಸುತ್ತದೆ. ಒಬ್ಬ ವ್ಯಾಪಾರಿಯಾಗಿ ತನ್ನದೇ ಆದ ಅದೆಷ್ಟೊ ತೊಂದರೆಗಳನ್ನ ಎದುರಿಸುತ್ತ ವ್ಯವಹಾರವನ್ನು ನೆಡೆಸುತ್ತಿರುವ ಸಂದರ್ಭದಲ್ಲಿ ಕಾನೂನಿನ ದೊಡ್ಡ ಪುಸ್ತಕವನ್ನು ಓದಿ ತಿಳಿದು ಅದರಂತೆ ನೆಡೆಯುವುದು ಪ್ರಾಯೋಗಿಕವಾಗಿ ಸಾಧ್ಯತೆಗೆ ದೂರವಾದದ್ದು. ಇನ್ನು ಕಾನೂನು ಹಾಗೂ ಲೆಕ್ಕಪತ್ರ ತಜ್ಞರಲ್ಲಿ ನಮ್ಮ ಅನುಮಾನ ಮತ್ತು ತೊಂದರೆಗಳನ್ನು ಕೇಳಿ ಬಗೆಹರಿಸಿ ಕೋಳ್ಳುವ ಸಂದರ್ಭಗಳಲ್ಲಿ; ಸಮಯ ಹಾಗೂ ಸಾಂದರ್ಭಿಕ ತೊಂದರೆಯಿಂದಾಗಿ ನಮ್ಮ ಅದೆಷ್ಟೋ ಅನುಮಾನಗಳು ಅನುಮಾನವಾಗಿಯೇ ಉಳಿದು ಬಿಡುತ್ತವೆ, ಹಾಗೆಂದು ಈ ಅನುಮಾನಗಳನ್ನು ಬಗೆಹರಿಸಿ ಕೊಳ್ಳದೆ ದಿನನಿತ್ಯದ ವ್ಯವಹಾರದಲ್ಲಿ ಹಾಗೆಯೇ ಮುಂದುವರಿದರೆ ಕೆಲವು ಸಂದರ್ಭಗಳಲ್ಲಿ ಅನಾವಶ್ಯಕವಾಗಿ ಕಾನೂನಿನ ತೊಂದರೆ ತೊಡಕುಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆಗಳು ಅಧಿಕ.

ಈ ಎಲ್ಲಾ ಅಂಶಗಳನ್ನು ಹಾಗೂ ತೊಂದರೆಗಳನ್ನು ಗಮನದಲ್ಲಿಟ್ಟು, ಈ ಚಿಕ್ಕ ಹಾಗೂ ಸಂಕ್ಷಿಪ್ತವಾದ ಮಾಹಿತಿ ಪುಸ್ತಕದಲ್ಲಿ ಒಬ್ಬ ಸಾಮಾನ್ಯ ವ್ಯಾಪಾರಿಗೆ ಅನ್ವಯವಾಗುವ ಕೆಲವು ಪ್ರಮುಖ ತೆರಿಗೆ ಕಾನೂನುಗಳ ಅಂಶವನ್ನು ಮತ್ತು ಲೆಕ್ಕಪತ್ರ ನಿರ್ವಹಣೆಯ ಕುರಿತಾದ ನಿಯಮಗಳನ್ನು ಒಟ್ಟಾಗಿ ಸಂಗ್ರಹಿಸಿ ಸಾಧ್ಯವಾದಷ್ಟೂ ಸರಳೀಕರಣ ಗೊಳಿಸುವ ಪ್ರಯತ್ನವನ್ನು ಮಾಡಿರುತ್ತೇನೆ. ವಿಷಯವನ್ನು ಸುಲಭವಾಗಿ ತಿಳಿಸುವ ಸಲುವಾಗಿ ಕೆಲವು ಭಾಗದಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ವಿಷಯವನ್ನು ವಿವರಿಸಿದ್ದೇನೆ.

ಧನ್ಯವಾದಗಳು.

ಅಧ್ಯಾಯ ೧

ಆದಾಯ ತೆರಿಗೆ ಕಾಯಿದೆ

ಪ್ರಸ್ತಾವನೆ:

ನಮ್ಮ ದೇಶದಲ್ಲಿ ಆದಾಯ ತೆರಿಗೆಯು ಕೇಂದ್ರ ಸರ್ಕಾರದ ಆಡಳಿತದ ಅಧಿನಕ್ಕೆ ಒಳಪಟ್ಟಿದ್ದು ಆದಾಯ ತೆರಿಗೆ ಕಾಯಿದೆಯಲ್ಲಿನ ನಿಯಮಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಹಕ್ಕನ್ನು ಕೇಂದ್ರಸರ್ಕಾರ ಹೊಂದಿರುತ್ತದೆ. ಸದ್ಯದಲ್ಲಿ ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯಿದೆಯನ್ನು ಆದಾಯ ತೆರಿಗೆ ಕಾಯಿದೆ ೧೯೬೧ ಎಂದು ಕರೆಯುತ್ತಾರೆ.(೨೦೧೨ರ ನಂತರ ಹೊಸ ಆದಾಯ ತೆರಿಗೆ ಕಾಯಿದೆಯು ದೇಶದಲ್ಲಿ ಜಾರಿಗೊಳ್ಳುವ ನಿರೀಕ್ಷೆಯಿದೆ. ಮತ್ತು ಈ ಕಾಯಿದೆಯನ್ನು ನೇರ ತೇರಿಗೆ ಸಂಹಿತೆ ೨೦೧೨ ಎಂದು ಕೇಂದ್ರ ಸರ್ಕಾರ ಕರೆಯಬಹುದೇನೊ.) ಆದಾಯ ತೆರಿಗೆಯ ದಿನನಿತ್ಯದ ಆಡಳಿತವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಮತ್ತು ಆದಾಯ ತೆರಿಗೆ ಇಲಾಖೆಗಳು ನಿರ್ವಹಿಸುತ್ತವೆ.

ಆದಾಯ ತೆರಿಗೆಯನ್ನು ವ್ಯಕ್ತಿಯ ವಾರ್ಷಿಕ ಆದಾಯದ ಆದಾರದ ಮೇಲೆ ಸಂಗ್ರಹಿಸಲಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಆದಾಯದ ಮೂಲಗಳು ಭಿನ್ನವಾಗಿರುತ್ತದೆ, ಆದಾಯದ ಪ್ರಮಾಣದಲ್ಲಿ ಕೂಡ ತುಂಬಾ ವ್ಯತ್ಯಾಸವಿರುತ್ತದೆ, ಹೀಗಾಗಿ ಎಲ್ಲರಿಗೂ ಅನ್ವಯವಾಗುವ ಏಕರೂಪದ ನಿಯಮವನ್ನು ರೂಪಿಸಿ ಏಕರೂಪದ ತೆರಿಗೆಯನ್ನು ಸಂಗ್ರಹಿಸುವುದು ಅಸಾಧ್ಯದ ಕೆಲಸ. ಆದರೆ ದೇಶವನ್ನು ಮುನ್ನೆಡೆಸುವ ಸಲುವಾಗಿ ದೇಶದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ತೆರಿಗೆಯನ್ನು ಸಂಗ್ರಹಿಸುವುದು ಸರ್ಕಾರದ ಪಾಲಿಗೆ ಒಂದು ಅನಿವಾರ್ಯವಾದ ಕೆಲಸ ಹೀಗಾಗಿ ಆದಾಯ ತೆರಿಗೆ ಕಾಯಿದೆಯ ಮೂಲಕ ವಿವಿಧ ರೀತಿಯ ನಿಯಮಾವಳಿಗಳನ್ನು ರೂಪಿಸಿ ಜನಸಾಮಾನ್ಯರಿಗೆ ಯಾರಿಗೂ ತೆರಿಗೆಯು ಹೊರೆಯಾಗದಂತೆ ಮತ್ತು ತೆರಿಗೆ ಪಾವತಿಸ ಬೇಕಾದಂತಹ ಯಾರೊಬ್ಬರೂ ತೆರಿಗೆ ಪಾವತಿ ಮಾಡದೆ ತಪ್ಪಿಕೊಳ್ಳದಂತೆ ನಿಯಮಗಳನ್ನು ರೂಪಿಸಿದೆ.

ಈ ಮೊದಲೆ ಹೇಳಿದಂತೆ ವ್ಯಕ್ತಿಯ ಆದಾಯದ ಮೂಲಗಳು ಭಿನ್ನವಾಗಿದ್ದು, ಸರ್ಕಾರದ ಆಡಳಿತದ ಅನುಕೂಲತೆಯ ಸಲುವಾಗಿ ಇವುಗಳನ್ನ ಮುಖ್ಯವಾಗಿ ೫ ವಿಧವನ್ನಾಗಿ ವಿಂಗಡಿಸಿಕೊಳ್ಳಲಾಗಿದೆ.

. ಸಂಬಳದ ಮೂಲಕ ಗಳಿಸಿದ ಆದಾಯ.

. ಮನೆ-ಆಸ್ತಿಗಳಿಂದ ಗಳಿಸಿದ ಆದಾಯ. (ಬಾಡಿಗೆ ಇತ್ಯಾದಿ)

. ವ್ಯಾಪಾರ, ವ್ಯವಹಾರ, ಉದ್ಯೋಗಗಳಿಂದ ಗಳಿಸಿದ ಆದಾಯ.

. ಬಂಡವಾಳ ಗಳಿಕೆ (ಅಥವಾ ಆಸ್ತಿಯೆಂದು ಪರಿಗಣಿಸಬಲ್ಲ ವಸ್ತುಗಳ ಮಾರಾಟದಿಂದ ಬಂದ ಆದಾಯ)

. ಇತರೆ ಆದಾಯಗಳು ( ಮೇಲಿನ ೪ ವಿಧಗಳಲ್ಲಿ ಒಳಗೊಳ್ಳದೇ ಉಳಿದ ಇತರ ಎಲ್ಲಾ ರೀತಿಯ ಆದಾಯಗಳು)

ಆದಾಯ ತೆರಿಗೆ ಕಾಯಿದೆಯಲ್ಲಿ ಬಳಕೆಯಾದ ಕೆಲವು ಶಬ್ದಗಳ ಅರ್ಥ:

ಆದಾಯ ತೆರಿಗೆ ಕಾಯಿದೆಯಲ್ಲಿ ಬಳಕೆಯಾದ ಕೆಲವು ಶಬ್ಧಗಳಿಗೆ ಅವುಗಳ ಭಾಷಾರ್ತಕ್ಕಿಂತ ಭಿನ್ನವಾದ ಅರ್ಥವನ್ನು ನೀಡಲಾಗಿದ್ದು ಅಂತಹ ಸಂದರ್ಭದಲ್ಲಿ ಕಾಯಿದೆಯಲ್ಲಿ ಬಳಕೆಯಾದ ಆ ಶಬ್ದದ ವಿಷೇಶಾರ್ಥವನ್ನು ಕಾಯಿದೆಯಲ್ಲಿಯೇ ಅಥವಾ ಇತರ ಕೆಲವು ಸಂಭಂದಿತ ಕಾಯಿದೆಯಲ್ಲಿ ವಿವರಿಸಲಾಗಿರುತ್ತದೆ ಮತ್ತು ಅಂತಹಃ ಸಂದರ್ಭದಲ್ಲಿ ಆ ಬಗ್ಗೆ ಉಲ್ಲೇಖವನ್ನು ಕಾಯಿದೆಯಲ್ಲಿ ನೀಡಲಾಗಿದೆ. ಉದಾಹರಣೆಗೆ ಹೇಳುವದಾದರೆ ವ್ಯಕ್ತಿ ಎಂಬ ಶಬ್ದಕ್ಕೆ ಕೇವಲ ಮನುಷ್ಯ ಎಂಬ ಅರ್ಥಮಾತ್ರ ಕೊಡದೆ ಕಂಪನಿಗಳು, ಕೋ-ಆಪರೇಟಿವ್ ಸೋಸಾಯಿಟಿಗಳು, ಪಾಲುದಾರಿಕೆ ಸಂಸ್ಥೆ, ಟ್ರಸ್ಟ, ಅವಿಭಾಜಿತ ಹಿಂದು ಕುಟುಂಬ, ಹೀಗೆ ಇನ್ನು ಕೆಲವು ವಿಧಗಳನ್ನು ಸೇರಿಸಿ ಅರ್ಥೈಸಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಆದಾಯ ತೆರಿಗೆಯನ್ನು ಕೇಂದ್ರಸರ್ಕಾರವು ಕೇವಲ ದೇಶದಲ್ಲಿನ ಪ್ರಜೆಗಳಿಂದ ಮಾತ್ರವಲ್ಲದೆ ಸಂಘ-ಸಂಸ್ಥೆಗಳಿಂದಲೂ, ಸ್ಥಳಿಯ ಆಡಳಿತ ಸಂಸ್ಥೆಗಳಿಂದಲೂ, ಕಂಪನಿಗಳಿಂದಲೂ, ಪಾಲುದಾರಿಕೆಯ ಸಂಸ್ಥೆಯಿಂದಲೂ, ಅವಿಭಾಜಿತ ಹಿಂದೂ ಕುಟುಂಬದಿಂದಲೂ, ಕೋ-ಆಪರೇಟಿವ್ ಸೋಸಾಯಿಟಿಯಿಂದಲೂ ಹೀಗೆ ಹಲವರಿಂದ ಸಂಗ್ರಹಿಸುತ್ತದೆ. ಈ ಎಲ್ಲರನ್ನು ಕೂಡ ವ್ಯಕ್ತಿ ಎಂದೇ ಪರಿಗಣಿಸಲಾಗುತ್ತದೆ. ಹೀಗೆಯೆ ಕಾಯಿದೆಯುದ್ದಕ್ಕು ಸಂದರ್ಭಾನುಸಾರ ಬಳಕೆಯಾದ ಅನೇಕ ಪದಗಳು ಅವುಗಳ ಭಾಷಾರ್ಥವನ್ನಲ್ಲದೆ ಕೆಲವು ಸಾಂದರ್ಭಿಕ ವಿಷೇಶಾರ್ಥವನ್ನು ಕೊಡುತ್ತವೆ.

ಈ ಮೊದಲೆ ಹೇಳಿದಂತೆ ಈ ಪುಸ್ತಕದಲ್ಲಿ ವಿಶೇಷವಾಗಿ ವ್ಯವಹಾರ ವ್ಯಾಪಾರ ಮತ್ತು ಉದ್ಯೋಗದಿಂದ ಒಬ್ಬ ವ್ಯಕ್ತಿಗಳಿಸಿದ ಆದಾಯದ ಬಗ್ಗೆ ಆದಾಯ ತೆರಿಗೆ ಕಾಯಿದೆಯಲ್ಲಿನ ನಿಯಮಗಳು ಏನು ಎಂಬುದರ ಬಗ್ಗೆ ವಿವರಿಸಲಾಗಿದೆ.

ಭಾಗ ೧

ಪಾನ್ ಕಾರ್ಡ: PAN CARD

ಪಾನ್ ಕಾರ್ಡ-ಪಾನ್ ಕಾರ್ಡ ಎಂದು ಹಾಗೆ ಬಹಳಷ್ಟು ಬಾರಿ ನಾವು ಕೇಳಿಯೇ ಇರುತ್ತೇವೆ, ಮತ್ತು ನಮ್ಮಲ್ಲಿ ಹಲವರಲ್ಲಿ ಪಾನ್ ಕಾರ್ಡ ಇದೆ ಕೂಡ ಆದರೆ ಅದರ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಅಷ್ಟಾಗಿ ಅರಿವು ಕಂಡು ಬರುವುದಿಲ್ಲ ಮತ್ತು ಪಾನ್ ಕಾರ್ಡ ವಿಚಾರವಾಗಿ ಬಹು ಸಾಮಾನ್ಯವಾಗಿ ಕೇಳಿ ಬರುವ ಕೆಲವು ಪ್ರಶ್ನೆಗಳು ಮತ್ತು ಅದರ ಉತ್ತರವನ್ನು ಈ ಕೆಳಗೆ ನೀಡಿರುತ್ತೆನೆ.

1. ಪಾನ್ ಕಾರ್ಡ ಅಂದ್ರೇನು.? ಯಾಕೇ ಮಾಡಿಸ್ಬೇಕ್ರೀ? ನನ್ನ ಹತ್ರ ಎರಡು ಮೂರು ಪಾನ್ ಕಾರ್ಡ ಇದೆ ಎನಾದ್ರು ತೊಂದ್ರೆ ಇದೆಯಾ.?

ಉತ್ತರ: ಪಾನ್ ಕಾರ್ಡ ಅಂದ್ರೆ ಪರಮನೆಂಟ್ ಅಕೌಂಟ್ ನಂಬರ್ ಅಥವಾ ಖಾಯಂ ಖಾತೆ ಸಂಖ್ಯೆ ಎಂದು. ಇದು ಒಂದು ತರಹ ನಿಮ್ಮ ಬ್ಯಾಂಕ ಅಕೌಂಟ್ ನಂಬರ್ ಇದ್ದಾಂಗೆನೆ. ನಿಮ್ಮ ಮತ್ತು ಆದಾಯ ತೆರಿಗೆ ಇಲಾಖೆಯ ನಡುವಿನ ಎಲ್ಲಾ ವ್ಯವಹಾರಗಳು ಆ ನಂಬರ್ ಮೂಲಕನೆ ನಡೆಯುತ್ತೆ. ಬ್ಯಾಂಕ್ ಅಕೌಂಟ್ಗು ಪಾನ್‌ಗು ಇರೋ ಮುಖ್ಯ ವ್ಯತ್ಯಾಸಾ ಅಂದ್ರೇ ನೀವು ಹೆಚ್ಚು ಹೆಚ್ಚು ಬ್ಯಾಂಕ್ ಅಕೌಂಟ ಓಪನ್ ಮಾಡಬಹುದು ಆದ್ರೇ ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಮಾಡಿಸೋದು ಅಪರಾಧ. ದಂಡ ಹಾಕ್ತಾರೆ...!!

2. ಮೊದಲು ಗೊತ್ತಿರಲಿಲ್ಲ ಮಾರಾಯರೆ. . ! ನನ್ನ ಹತ್ರ ಎರಡು ಮೂರು ಪಾನ್ ಕಾರ್ಡ ಇದೆಯಲ್ಲ ಎನು ಮಾಡೊದೀಗ..?

ಉತ್ತರ: ಇಂತಹ ಸಂದರ್ಭದಲ್ಲಿ ಸಂಪೂರ್ಣ ಸರಿಯಾಗಿದ್ದ ಒಂದು ಪಾನ್ ಮಾತ್ರ ಇಟ್ಟು ಕೊಂಡು ಉಳಿದೆಲ್ಲಾ ಪಾನ್ ಕಾರ್ಡಗಳನ್ನ ಆದಾಯ ತೆರಿಗೆ ಇಲಾಖೆಗೆ ವಾಪಸ ಮಾಡಬೇಕು ಮತ್ತು ಅವುಗಳನ್ನು ರದ್ದು ಪಡಿಸುವಂತೆ ಅರ್ಜಿ ನೀಡಬೇಕು. ಹಾಗೂ ಮುಂದೆ ಎಂದು ಆ ರದ್ದುಪಡಿಸಿದ ಪಾನ್ ನಂಬರ್‌ಗಳನ್ನು ಎಲ್ಲೂ ಬಳಕೆ ಮಾಡಬಾರದು. ನಿಮ್ಮಲ್ಲೇ ಇರಿಸಿಕೊಂಡ ಒಂದು ಪಾನ್ ನಂಬರ್ ಮಾತ್ರ ಮುಂದೆ ಎಲ್ಲಾ ಕಡೆಯಲ್ಲೂ ಉಪಯೋಗಿಸಬೇಕು.

3. ಪಾನ್ ನಂಬರ್ ಮಾಡ್ಸಿದ್ಮೇಲೆ ಇನ್ಕಂಟ್ಯಾಕ್ಸ್ ರಿಟರ್ನ ಕಡ್ಡಾಯವಾಗಿ ಸಲ್ಲಿಸಬೇಕಾ.?

ಉತ್ತರ: ಇಲ್ಲಾ, ಪಾನ್ ಮಾಡಿಸಿದಾಕ್ಷಣ ರಿಟರ್ನ ಸಲ್ಲಿಸಲೇ ಬೇಕೆಂದು ಇಲ್ಲ. ಇದು ನಿಮ್ಮ ತಪ್ಪು ಗ್ರಹಿಕೆಯಷ್ಟೇ.

4. ಪಾನ್ ಕಾರ್ಡ ಕಳದು ಹೋದ್ರೆ ಏನು ಮಾಡಬೇಕು.?

ಉತ್ತರ: ಪಾನ್ ಕಾರ್ಡ ಕಳದು ಹೋದ್ರೆ ಯಾವುದೇ ಕಾರಣಕ್ಕೂ ಹೊಸಾ ಪಾನ್ ಮಾಡಿಸಬಾರದು. ಬದಲಿಗೆ ಹಳೆಯ ನಂಬರಿನದೆ ಆದಾ ಮತ್ತೊಂದು ಕಾರ್ಡ ಪಡೆಯಬೇಕು.

5. ನನ್ನ ಪಾನ್ ಕಾರ್ಡನಲ್ಲಿನ ಮಾಹಿತಿ ತುಂಬಾ ತಪ್ಪಿದೆಯಲ್ಲಾ ಹೊಸತು ಮಾಡಿಸಲಾ.?

ಉತ್ತರ: ಪಾನ್ ಕಾರ್ಡನಲ್ಲಿ ತುಂಬಾ ತಪ್ಪಿದೆ ಅಂತಾ ಕೂಡಾ ಹೊಸಾ ಪಾನ್‌ಕಾರ್ಡ ಮಾಡಿಸೋಹಾಗಿಲ್ಲಾ. ಬದಲಿಗೆ ಪಾನ್ ಕಾರ್ಡ ತಿದ್ದುಪಡಿ ಮಾಡಿಸಬೇಕು.

ಕೆಲವು ಸಂದರ್ಭಗಳಲ್ಲಿ ಬ್ಯಾಂಕಗಳಲ್ಲಿ, ಅಥವಾ ಮತ್ತೂ ಕೆಲವು ಕಡೆಗಳಲ್ಲಿ ನಿಮ್ಮ ಪಾನ್ ನಂಬರ ಕೇಳಿರುವಂತಹ ಸನ್ನಿವೇಶವನ್ನು ನೀವು ಎದುರಿಸಿರಲು ಬಹುದು ಅಥವಾ ಬೇರೆಯವರು ಈ ಬಗ್ಗೆ ಹೇಳಿದನ್ನು ಕೇಳಿರಲು ಬಹುದು, ಹೆಚ್ಚಿನವರು ಅಂಥಹ ಸಂದರ್ಭಗಳಲ್ಲಿ ಪಾನ್ ನೀಡದೆ ಅಥವಾ ಸರಿಯಾದ ಪಾನ್ ನೀಡದೆ ಉದಾಸಿನ ತೋರುವುದಿದೆ, ಆದರೆ ಗಮನಿಸಿ ಯಾರದರು ನಿಮ್ಮ ಬ್ಯಾಂಕ್ ಖಾತೆಗೆ ಹಣ ತುಂಬುತ್ತೇನೆ ಅಂದರೆ ನೀವು ಈ ಉದಾಸೀನವನ್ನು ತೋರಿಸುತ್ತಿರಾ?! ಬದಲಿಗೆ ಹತ್ತು ಭಾರಿ ಕೊಟ್ಟ ಬ್ಯಾಂಕ್ ಅಕೌಂಟ್ ಸಂಖ್ಯೆ ಸರಿ ಇದೇಯಾ ಎಂದು ಪರೀಕ್ಷಿಸಿ ನೋಡಿ ನಿಮ್ಮ ಖಾತೆಗೆ ಹಣ ಪಾವತಿಯಾದ್ದನ್ನು ಖಾತ್ರಿ ಪಡಿಸಿಕೋಳ್ಳುತ್ತೀರಿ.!!! ಇದೆ ಕಾಳಜಿ ನಿಮ್ಮ ಪಾನ್ ಕೇಳಿದಾಗಲು ನಿಮಗಿರಬೇಕು ಏಕೆಂದರೆ ನಿಮ್ಮಲ್ಲಿ ಪಾನ್ ಕೇಳಿದವರು ನಿಮಗೆ ಕೊಡಬೇಕಾದ ನಿಮ್ಮದೆ ಹಣದಲ್ಲಿ ಕಾನೂನಿನನ್ವಯ ಟ್ಯಾಕ್ಸ ಕಟ್ ಮಾಡಿ ಸರ್ಕಾರಕ್ಕೆ ತುಂಬುತ್ತಾರೆ. ನೀವು ತಪ್ಪು ಪಾನ್ ನೀಡುವ ಅಥವಾ ಪಾನ್ ನೀಡದೆ ಇರುವ ಮೂಲಕ ನೀವಂದು ಕೊಂಡಂತೆ ಲಾಭಮಾಡಿಕೊಂಡಿರದೆ ನಷ್ಟವನ್ನೆ ಅನುಭವಿಸಿರುತ್ತಿರಿ. ಹೀಗಾಗಿ ದಯಮಾಡಿ ಸರಿಯಾದ ಪಾನ್ ನೀಡಿ ಮತ್ತು ನಿಮ್ಮ ಖಾತೆಗೆ ಟ್ಯಾಕ್ಸ ಜಮಾವಣೆಯಾದ ಬಗ್ಗೆ ಇಂಟರ್ನೆಟ್ನಲ್ಲಿ ನೋಡಿ ಕಾತ್ರಿ ಮಾಡಿಕೋಳ್ಳಿ. ಇಂಟರ್ನೆಟ್ನಲ್ಲಿ ನಿಮ್ಮ ಪಾನ್ ಖಾತೆಯನ್ನು ನೋಡುವದು ಹೇಗೆ ಎಂಬುದನ್ನು ಮುಂದೆ ಟಿ.ಡಿ.ಏಸ್. ಎಂಬ ಪ್ರತ್ಯೆಕ ಭಾಗದಲ್ಲಿ ವಿವರವಾಗಿ ವಿವರಿಸುತ್ತೇನೆ.

ಭಾಗ ೨

ಇನ್ಕಂ ಟ್ಯಾಕ್ಸ ರಿಟರ್ನ INCOME TAXRETURN

6. ಇನ್ಕಂ ಟ್ಯಾಕ್ಸ ರಿಟರ್ನ ಅಂದರೆ ಏನು.?

ಉತ್ತರ: ಒಬ್ಬ ವ್ಯಕ್ತಿಯ ಎಲ್ಲಾ ರೀತಿಯ ವಾರ್ಷಿಕ ಆದಾಯ ಖರ್ಚು ಉಳಿತಾಯ ಇತ್ಯಾದಿ ಮಾಹಿತಿಯನ್ನು ಆದಾಯ ತೆರಿಗೆ ಕಾನೂನಿನ ಹಾಗೂ ನಿಯಮಾನುಸಾರ ಲೆಕ್ಕಾಚಾರಮಾಡಿ ಆದಾಯ ತೆರಿಗೆ ಇಲಾಖೆ ನಿಗದಿ ಪಡಿಸಿದ ನಮೂನೆಯಲ್ಲಿ(ಫಾರ್ಮ) ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ಮಾಹಿತಿಯನ್ನೇ ಇನ್ಕಂ ಟ್ಯಾಕ್ಸ ರಿಟರ್ನ ಎಂದು ಕರೆಯುತ್ತಾರೆ.

7. ಇನ್ಕಂ ಟ್ಯಾಕ್ಸ ರಿಟರ್ನ ಯಾರು ಸಲ್ಲಿಸಬೇಕು.?

ಉತ್ತರ: ಯಾರು ಇನ್ಕಂ ಟ್ಯಾಕ್ಸ ರೀಟರ್ನ ಸಲ್ಲಿಸಬೇಕು ಎಂಬುದನ್ನು ಹಲವು ಅಂಶಗಳು ನಿರ್ಧರಿಸುತ್ತವೆ. ಅವುಗಳು ಇಂತಿವೆ,

· ಯಾವ ವ್ಯಕ್ತಿಯ ವಾರ್ಷಿಕ ಆದಾಯವು ಆದಾಯ ತೆರಿಗೆ ಕಾನೂನಿನಲ್ಲಿ ನಿಗದಿ ಪಡಿಸಿದ ಮೂಲ ವಿನಾಯತಿ ಆದಾಯದ ಮಿತಿಯನ್ನು ಮೀರುತ್ತದೆಯೊ ಅಂತಹವರು ಕಡ್ಢಾಯವಾಗಿ ರಿಟರ್ನ ಸಲ್ಲಿಸಬೇಕು.

· ಯಾವ ವ್ಯಕ್ತಿಯ ಆದಾಯವು ಆದಾಯ ತೆರಿಗೆ ಕಾನೂನಿನಲ್ಲಿ ಹೇಳಿದ ಮೂಲ ವಿನಾಯತಿ ಆದಾಯದ ಪರಿಮಿತಿಯಲ್ಲೆ ಇದ್ದು; ಮತ್ತು ಅಂತಹ ವ್ಯಕ್ತಿಯು ಆದಾಯವನ್ನು ಪಡೆಯುವ ಸಂದರ್ಭದಲ್ಲಿ ಟಿ.ಡಿ.ಎಸ್/ಟಿ.ಸಿ.ಎಸ್ (ಟ್ಯಾಕ್ಸ ಕಟ್ ಮಾಡಿರುವುದು) ಮಾಡಿದ್ದರೆ, ಅಂತಹಃ ಸಂದರ್ಭದಲ್ಲಿ ಕಟ್ ಮಾಡಿದ ಟ್ಯಾಕ್ಸನ್ನು ವಾಪಸ್ ಪಡೆಯುವ ಸಲುವಾಗಿಯೂ ರಿಟರ್ನ ಸಲ್ಲಿಸಬೇಕು.

· ಈ ವರ್ಷದ ವ್ಯವಹಾರದಲ್ಲಿ ನಷ್ಟವಾಯಿತೆಂದು ತಿಳಿಯಿರಿ ಅಂತಹ ಸಂದರ್ಭದಲ್ಲಿ ಟ್ಯಾಕ್ಸ ಕಟ್ಟುವದಂತು ಇಲ್ಲವೇ ಇಲ್ಲ, ಆದರೆ ಸರಿಯಾದ ಸಮಯಕ್ಕೆ ರಿಟರ್ನ ಸಲ್ಲಿಸುವ ಮೂಲಕ ನಿಮ್ಮ ಈ ವರ್ಷದ ನಷ್ಟವನ್ನು ಮುಂಬರುವ ವರ್ಷದಲ್ಲಿನ ಲಾಭದೊಂದಿಗೆ ಕಳೆದು ಮುಂಬರುವ ವರ್ಷಗಳಲ್ಲೂ ಸಹ ಟ್ಯಾಕ್ಸ ಉಳಿಸಬಹುದು. ಸರಿಯಾದ ಸಮಯಕ್ಕೆ ರಿಟರ್ನ ಸಲ್ಲಿಸದಿದ್ದ ಪಕ್ಷದಲ್ಲಿ ಈ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

8. ರಿಟರ್ನ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?

ಉತ್ತರ: ನಿಮ್ಮ ಲೆಕ್ಕಪತ್ರಗಳು ಲೆಕ್ಕಪರೀಶೊಧನೆಗೊಳಟ್ಟಂತಹ ಸಂದರ್ಭದಲ್ಲಿ ಪ್ರಸ್ತುತ ನಿಯಮದ ಪ್ರಕಾರ ಸಪ್ಟೆಂಬರ್ ಮಾಸಾಂತ್ಯದೊಳಗೆ ರಿಟರ್ನ ಸಲ್ಲಿಸಬೇಕು. ಒಂದು ಪಕ್ಷ ನಿಮ್ಮ ಲೆಕ್ಕಪತ್ರಗಳು ಲೆಕ್ಕಪರಿಶೊಧನೆಗೆ ಒಳಪಡದಿದ್ದಂತಹ ಸಂದರ್ಭದಲ್ಲಿ ಜುಲೈ ಮಾಸಾಂತ್ಯದ ಒಳಗಾಗಿ ರಿಟರ್ನ ಸಲ್ಲಿಸಬೇಕು.

ಯಾರು ಲೆಕ್ಕಪರಿಶೊಧನೆಗೆ ಒಳಪಡುತ್ತರೆ ಮತ್ತು ಯಾರು ಲೆಕ್ಕಪರಿಶೊಧನೆಗೆ ಒಳಪಡುವುದಿಲ್ಲ ಎಂಬುದನ್ನು ಮುಂಬರುವ ಭಾಗಗಳಲ್ಲಿ ವಿವರಿಸುತ್ತೇನೆ.

ತಾವು ದಯವಿಟ್ಟು ಇಲ್ಲಿ ಒಂದು ಅಂಶವನ್ನು ಗಮನಿಸ ಬೇಕು, ಕಾಯಿದೆಯಲ್ಲಿನ ಕೆಲವು ನಿಯಮಗಳು ಕಾಲಕ್ಕನುಸಾರ ಬದಲಾವಣೆಗೊಳ್ಳುತ್ತಿರುತ್ತವೆ. ಆದರೆ ಮೂಲ ಸಿದ್ಧಾಂತಗಳು ಹೆಚ್ಚಿನದಾಗಿ ಬದಲಾಗುವದಿಲ್ಲ ಮತ್ತು ಅದೆ ಸೈದ್ಧಾಂತಿಕ ಆದಾರದ ಮೇಲೆಯೆ ಮುಂಬರುವ ಬದಲಾವಣೆಯನ್ನು ಕಾಲದ ಅಗತ್ಯದ ಸಲುವಾಗಿ ಮಾಡಲಾಗುತ್ತದೆ. ಉದಾಹರಣೆಗೆ ಹೇಳುವದಾದರೆ ಸಾಮಾನ್ಯವಾಗಿ ಪ್ರತಿ ವರ್ಷವು ಕೇಂದ್ರ ಬಜೆಟ್ ಸಂದರ್ಭದಲ್ಲಿ ಮೂಲ ವಿನಾಯತಿ ಆದಾಯದ ಮಟ್ಟವನ್ನು ಬದಲಾಯಿಸುವುದು ತಾವೆಲ್ಲರು ಗಮನಿಸಿಯೇ ಇರುವಂತಹ ಒಂದು ಬದಲಾವಣೆ ಹೀಗೆ ಇನ್ನು ಅನೇಕ ಬದಲಾವಣೆಗಳು ಕಾಲದ ಅಗತ್ಯತೆಗನುಗುಣವಾಗಿ ಬದಲಾಯಿಸುತ್ತಿರುತ್ತಾರೆ.

9. ಒಂದು ವೇಳೆ ರಿಟರ್ನ ಸಲ್ಲಿಸುವಾಗ ತಪ್ಪು ಆದರೆ ಏನು ಮಾಡಬೇಕು?

ಉತ್ತರ: ಮೊದಲು ನಿಗದಿತ ಸಮಯದೊಳಗೆ ರಿಟರ್ನ ಸಲ್ಲಿಸಿದ್ದರೆ ಮುಂದೆ ಅದನ್ನು ಸಾಕಷ್ಟು ಬಾರಿ ತಿದ್ದುಪಡಿ ಮಾಡಿ ಮರುಸಲ್ಲಿಸಲು ಅವಕಾಶವಿದೆ.

10. ಒಂದು ವರ್ಷ ರಿಟರ್ನ ಸಲ್ಲಿಸಿದ ಮೇಲೆ ಪ್ರತಿ ವರ್ಷಾನು ಸಲ್ಲಿಸಲೇ ಬೇಕಾ?

ಉತ್ತರ: ಇಲ್ಲ ಹಾಗೆಂದೆನು ಇಲ್ಲ ಮೇಲೆ ಉತ್ತರಿಸಿದ ಪ್ರಶ್ನೆ ಸಂಖ್ಯೇ ೮ನ್ನು ಗಮನಿಸ ಬಹುದು ಅದರಲ್ಲಿ ಹೇಳಿದ ಯಾವುದಾದರು ನಿಯಮಕ್ಕೆ ಒಳಪಟ್ಟರೆ ಮಾತ್ರ ರಿಟರ್ನ ಸಲ್ಲಿಸಬೇಕು.

11. ನೀವು ನಿಮ್ಮ ಈ ವರ್ಷದ ರಿಟರ್ನ ಸಲ್ಲಿಸಿಲ್ಲ ಬೇಗ ಸಲ್ಲಿಸಿ ಅಂತ ಆದಾಯ ತೆರಿಗೆ ಇಲಾಖೆಯವರು ಪತ್ರ ಬರೆದಿದ್ದಾರಲ್ಲ ಮಾರಾಯರೇ ಏನು ಮಾಡೊದು....?

ಉತ್ತರ: ಮೊದಲೆ ಹೇಳಿದಂತೆ, ನೀವು ಪ್ರತಿವರ್ಷವು ರಿಟರ್ನ ಸಲ್ಲಿಸಲೇಬೇಕೆಂದೇನು ಇಲ್ಲ ಆದರೆ ಮೇಲೆ ಹೇಳಿದ ಪ್ರಶ್ನೆ ಸಂಖ್ಯೆ ೮ರ ಮೊದಲ ಅಂಶದಡಿಯಲ್ಲಿ ನೀವು ಒಳಪಟ್ಟರೆ ಕಡ್ಡಾಯವಾಗಿ ರಿಟರ್ನ ಸಲ್ಲಿಸಲೇಬೇಕು.

ಕೆಲವೊಮ್ಮೆ ನೀವು ಸರಿಯಾದ ಸಮಯಕ್ಕೆ ರಿಟರ್ನ ಸಲ್ಲಿಸಿಯೂ ಕೆಲವು ಆಡಳಿತಾತ್ಮಕ ವಿಫಲತೆಯಿಂದಾಗಿ ಇತಂಹದೊಂದು ಪತ್ರ ನಿಮಗೆ ಬಂದಿರಬಹುದು ಅಂತಹ ಸಂದರ್ಭದಲ್ಲಿ ನೀವು ಒಂದು ಸ್ಪಷ್ಟೀಕರಣ ಪತ್ರದ ಮೂಲಕ ರಿಟರ್ನ ಸಲ್ಲಿಸಿದ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ನೀಡುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. (ನಿಮ್ಮ ಸ್ಪಷ್ಟೀಕರಣ ಪತ್ರದಲ್ಲಿ ರಿಟರ್ನ ಸಲ್ಲಿಸಿದ ದಿನಾಂಕ ಮತ್ತು ಸ್ವೀಕೃತಿ ಸಂಖ್ಯೆಯನ್ನು ಬರೆಯಲು ಮರೆಯದಿರಿ)

ಇನ್ನು ಮೊದಲೆ ಹೇಳಿದಂತೆ ನಿಮ್ಮ ಆದಾಯವು ಆದಾಯ ತೆರಿಗೆ ಕಾಯಿದೆಯಲ್ಲಿ ಹೇಳಿದ ಮೂಲ ವಿನಾಯತಿ ಮಟ್ಟವನ್ನು ಮೀರದಿದ್ದರು ಸಹ ನೀವು ಒಂದು ಸ್ಪಷ್ಟೀಕರಣ ಪತ್ರವನ್ನು ಬರೆದು ತಿಳಿಸಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

12. ಕೊನೆಯ ದಿನಾಂಕದ ಒಳಗೆ ರಿಟರ್ನ ಸಲ್ಲಿಸಲಾಗದಿದ್ದ ಸಂದರ್ಭದಲ್ಲಿ ಏನು ಮಾಡಬೇಕು?

ಉತ್ತರ: ಮೊದಲನೆಯದಾಗಿ ಇಂತಹ ಅಭ್ಯಾಸ ಒಳ್ಳೆಯದಲ್ಲ, ಸಾಧ್ಯವಾದಷ್ಟು ನಿಗದಿತ ಸಮಯದೊಳಗೆ ರಿಟರ್ನಸಲ್ಲಿಸುವ ಮೂಲಕ ಕಾನೂನಿನ ಎಲ್ಲಾ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಒಂದು ಪಕ್ಷ ಅನಿವಾರ್ಯ ಕಾರಣದಿಂದಾಗಿ ಸಲ್ಲಿಸಲಾಗದಿದ್ದ ಸಮಯದಲ್ಲಿ ಕೂಡ ಪರಿಹಾರಗಳಿವೆ. ಅವೇನೆಂದರೆ ಸಂಬಂಧ ಪಟ್ಟ ಕರನಿರ್ಧರಣಾ ವರ್ಷ ಅಂತ್ಯಗೊಂಡ ಒಂದು ವರ್ಷದ ಒಳಗೆ ಸಲ್ಲಿಸಬಹುದು.

ಉದಾಹರಣೆ: ನಿಮ್ಮ ಆರ್ಥಿಕ ವರ್ಷವು ೩೧-೦೩-೨೦೧೧ರಂದು ಮುಕ್ತಾಯವಾಯಿತು ಅಂದು ಕೊಂಡರೆ ೧)ಲೆಕ್ಕ ಪರಿಶೋಧನೆಗೊಳಪಡದಿದ್ದರೆ ೩೧-೦೭-೨೦೧೧ ಕೊನೆಯದಿನ

)ಲೆಕ್ಕ ಪರಿಶೋಧನೆಗೊಳಪಟ್ಟರೆ ೩೦-೦೯-೨೦೧೧ ಕೊನೆಯ ದಿನ

ಯಾವುದೋ ಅತಿ ಅನಿವಾರ್ಯ ಕಾರಣದಿಂದಾಗಿ ನಿಮಗನ್ವಯವಾಗುವ ಮೇಲೆ ಹೇಳಿದ ಸಮಯದೊಳಗೆ ರಿಟರ್ನ ಸಲ್ಲಿಸದಿದ್ದ ಪಕ್ಷದಲ್ಲಿ ೩೦-೦೩-೨೦೧೩ರರವರೆಗೆ ಕೊನೆಯದಾಗಿ ಅವಕಾಶ ಪಡೆಯಬಹುದು.

ಆರ್ಥಿಕ ವರ್ಷ: ಆರ್ಥಿಕ ವರ್ಷ ಎಂದರೆ ಎಪ್ರಿಲ್ ಒಂದರಿಂದ ಮಾರ್ಚ ಮೂವತ್ತೊಂದರೊಳಗಿನ ಹನ್ನೆರಡು ತಿಂಗಳನ್ನು ಸರ್ಕಾರವು ಆದಾಯ ತೆರಿಗೆಯನ್ನು ನಿರ್ಧರಿಸುವ ಸಲುವಾಗಿ ಒಂದು ವರ್ಷ ಎಂದು ಪರಿಗಣಿಸುತ್ತದೆ. ಆ ಅವಧಿಯಲ್ಲಿ ವ್ಯಕ್ತಿಯು ಗಳಿಸಿದ ಒಟ್ಟು ಆದಾಯದ ಆಧಾರದ ಮೇಲೆ ತೆರಿಗೆಯನ್ನು ನಿರ್ಧರಿಸುತ್ತದೆ. ಕಾರಣ ಆ ಅವಧಿಗೆ ಆರ್ಥಿಕ ವರ್ಷ ಎಂದು ಕರೆಯುತ್ತಾರೆ.

ಕರನಿರ್ಧರಣಾ ವರ್ಷ: ಕರನಿರ್ಧರಣಾವರ್ಷ ಎಂದರೆ ಮೇಲೆ ವಿವರಿಸಿದ ಆರ್ಥಿಕ ವರ್ಷ ಮುಗಿದ ದಿನದಿಂದ ಆರಂಭವಾಗುವ ಒಂದು ವರ್ಷವನ್ನು ಕರನಿರ್ಧರಣಾ ವರ್ಷ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಸರ್ಕಾರವು, ಆರ್ಥಿಕ ವರ್ಷದಲ್ಲಿ ವ್ಯಕ್ತಿಯು ಗಳಿಸಿದ ಆದಾಯದ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕಹಾಕುತ್ತದೆ.

ಉದಾಹರಣೆಗೆ: ೩೧-೦೩-೨೦೧೧ ರಂದು ನಿಮ್ಮ ಒಂದು ಆರ್ಥಿಕ ವರ್ಷ ಅಂತ್ಯವಾಗಿ ಮತ್ತೊಂದು ಆರ್ಥಿಕ ವರ್ಷ ಆರಂಭವಾಗುತ್ತದೆ. ಅಂತೆಯೇ ಸರ್ಕಾರದ ಪಾಲಿಗೆ ೦೧-೦೪-೨೦೧೧ ರಿಂದ ಹೊಸ ಕರನಿರ್ಧರಣಾವರ್ಷವು ಆರಂಭವಾಗುತ್ತದೆ. ನಿಮ್ಮ ೦೧-೦೪-೨೦೧೦ ರಿಂದ ೩೧-೦೩-೨೦೧೧ ರವರೆಗಿನ ಆರ್ಥಿಕವರ್ಷದ ಕರನಿರ್ಧರಣೆಯನ್ನು ಸರ್ಕಾರವು ೦೧-೦೪-೨೦೧೧ ರಿಂದ ೩೧-೦೩-೨೦೧೨ ವರೆಗಿನ ಕರನಿರ್ಧರಣಾ ವರ್ಷದಲ್ಲಿ ಮಾಡುತ್ತದೆ.

13. ಇನ್ಕಂ ಟ್ಯಾಕ್ಸ ರಿಟರ್ನ ಇ-ಫೈಲಿಂಗ್ ಮಾಡುವದು ಅಂದರೇನು.?

ಉತ್ತರ: ನಿಮ್ಮ ಆದಾಯ ತೆರಿಗೆಯ ರೀಟರ್ನಅನ್ನು ಆದಾಯ ತೆರಿಗೆ ಇಲಾಖೆಯವರ ವೆಬ್‌ಸೈಟಿನ ಮೂಲಕ ಸಲ್ಲಿಸುವ ವಿಧಾನವನ್ನು ಇ-ಫೈಲಿಂಗ್ ಎಂದು ಹೆಸರು. (ಸಧ್ಯದ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ವಿಳಾಸ www.incometaxindiaefiling.gov.in)

14. -ಫೈಲಿಂಗ್ ಮತ್ತು ಪೇಪರ್ ರಿಟರ್ನಗಳಲ್ಲಿ ಯಾವುದು ಉತ್ತಮ ಮತ್ತು ಸುರಕ್ಷಿತ?

ಉತ್ತರ: ಯಾವುದು ಉತ್ತಮ ಎಂಬ ಪ್ರಶ್ನೆಗೆ ಇ-ಫೈಲಿಂಗ್ ಎಂಬುದೆ ಉತ್ತರ. ಕಾರಣ ಇದರಿಂದಾಗಿ ನೀವು ಪೇಪರ ಉಳಿಸುವ ಮೂಲಕ ಪ್ರಕೃತಿ ನಾಶವಾಗುವದನ್ನು ತಡೆಯುತ್ತಿರಿ. ಜೊತೆಯಲ್ಲಿ ಯಾವುದೇ ಓಡಾಟವಿಲ್ಲದೆ ಕಂಪ್ಯೂಟರ ಮುಂದೆ ಕುಳಿತು ನಿಮ್ಮ ಬಿಡುವಿನ ಸಮಯದಲ್ಲಿ ಕೂಡ ರಿಟರ್ನ ಫೈಲ್ ಮಾಡಿ ಮುಗಿಸಿಬಿಡಬಹುದು. ತನ್ಮೂಲಕ ಇನ್ಕಂ ಟ್ಯಾಕ್ಸ ರಿಟರ್ನ ಸಲ್ಲಿಸುವಿಕೆ ನಿಮಗೊಂದು ತಲೆ ನೋವಿನ ಕೆಲಸವಾಗುಳಿಯುವದಿಲ್ಲ. ಯಾವದು ಸುರಕ್ಷಿತ ಎಂಬುದಕ್ಕೆ ಎರಡು ವ್ಯವಸ್ಠೆಗಳು ಸುರಕ್ಷಿತವೆ.

ನಿಮ್ಮ ಆದಾಯದ ಮೂಲವನ್ನು ಆದರಿಸಿ ಇನ್ಕಂ ಟ್ಯಾಕ್ಸ ರಿಟರ್ನ ಫಾರ್ಮ ಬದಲಾಗುತ್ತದೆ, ಮತ್ತು ವರ್ಷದಿಂದ ವರ್ಷಕ್ಕೆ ಇಲಾಖೆಯು ಹೊಸ ರೀತಿಯ ಫಾರ್ಮಗಳನ್ನು ಬಿಡುಗಡೆಮಾಡುತ್ತದೆ ಮತ್ತು ಈ ಫಾರ್ಮಗಳನ್ನು ಮತ್ತು ಇದಕ್ಕೆ ಸಂಬಂಧ ಪಟ್ಟ ಇ-ಫೈಲಿಂಗ್ ಸಾಫ್ಟ್‌ವೇರ್‌ಗಳನ್ನು ಮೇಲೆ ಹೇಳಿದ ವೆಬ್‌ಸೈಟಿನ ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು. ಒಂದು ಪಕ್ಷ ನೀವು ಇ-ಫೈಲ್ ಮಾಡದೆ ಪೇಪರ್ ರಿಟರ್ನನನ್ನೆ ಫೈಲ್ ಮಾಡಬೇಕೆಂದವರಾಗಿದ್ದಲ್ಲಿ ನಿಮಗೆ ಸಂಬಂಧಪಟ್ಟ ಆದಾಯ ತೆರಿಗೆ ಕಛೇರಿಯಿಂದ ಪೇಪರ್ ರಿಟರ್ನ ಫಾರ್ಮ ಉಚಿತವಾಗಿ ಪಡೆಯಬಹುದು. ಆದರೆ ದಯವಿಟ್ಟು ಇ-ಫೈಲಿಂಗ್ ಮಾಡುವ ಮೂಲಕ ಪರಿಸರವನ್ನು ರಕ್ಷಿಸಿರಿ.

ಒಬ್ಬ ವ್ಯಕ್ತಿಗೆ ಎಷ್ಟೇ ವಿಧದ ಆದಾಯದ ಮೂಲಗಳು ಇದ್ದರು ಸಹ ಈ ಎಲ್ಲ ಆದಾಯಗಳನ್ನು ಒಟ್ಟಾಗಿ ಸೇರಿಸಿ ಲೆಕ್ಕಹಾಕಿ ಸೂಕ್ತವಾದ ಒಂದು ಇನ್ಕಂ ಟ್ಯಾಕ್ಸ ರಿಟರ್ನ ತುಂಬಿದರಾಯಿತು.

ಉದಾಹರಣೆಗೆ: ನೀವು ನಿಮ್ಮ ಸ್ವಂತ ಹೆಸರಿನಲ್ಲಿ ಎರಡು ಕಡೆಗಳಲ್ಲಿ ಅಂಗಡಿಯನ್ನು ಹೊಂದಿದ್ದಿರಿ ಎಂದಾದರೆ ಒಂದೊಂದು ಅಂಗಡಿಗೆ ಒಂದೊಂದು ರಿಟರ್ನ ತುಂಬಬಾರದು ಮತ್ತು ನಿಮ್ಮ ಈ ಎರಡು ಆದಾಯವನ್ನು ಹಾಗೂ ಇನ್ನುಳಿದ ಆದಾಯವನ್ನು ಅಂದರೆ ಕೃಷಿ ಆದಾಯ, ಯಾವುದಾದರು ಎಜನ್ಸಿ ಇದ್ದರೆ ಅದರಿಂದ ಬಂದ ಆದಾಯ, ಉಳಿದಂತೆ ಯಾವುದೆ ರೀತಿಯ ಆದಾಯ ಹೀಗೆ ಎಲ್ಲವನ್ನು ಒಟ್ಟು ಸೇರಿಸಿಯೆ ಲೆಕ್ಕಹಾಕಿ ಒಂದು ಇನ್ಕಂ ಟ್ಯಾಕ್ಸ ರಿಟರ್ನ ತುಂಬಬೇಕು.

ಭಾಗ-

ತೆರಿಗೆ ಕಡಿತ TAX DEDUCTION

ತೆರಿಗೆ ಕಡಿತ ಎಂದರೆ ಕೆಲವೊಮ್ಮೆ ಸರ್ಕಾರವು ತೆರಿಗೆಯನ್ನು ನಾನಾ ವಿಧವಾಗಿ ಸಂಗ್ರಹಿಸುತ್ತದೆ ಮತ್ತು ಇದರಲ್ಲಿ ಕೆಲವು ವಿಧಾನಗಳು ತೆರಿಗೆ ವಂಚನೆ ಮಾಡದಂದೆ ತಡೆಯುವ ಉದ್ದೇಶವನ್ನು ಕೂಡ ಹೊಂದಿರುತ್ತದೆ. ಇಂತಹ ವಿಧಾನಗಳಲ್ಲಿ ತೆರಿಗೆಯನ್ನು ಆದಾಯ ಪಡೆಯುವ ಸ್ಥಳದಲ್ಲೆ ಕಡಿತ ಗೊಳಿಸಿ ಕಡಿತ ಗೊಳಿಸಿದ ಹಣವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆಯನ್ನು ತರಲಾಗಿದೆ.

ಇದನ್ನು ಇನ್ನು ಸರಳಿಕರಿಸಿ ಉದಾಹರಣೆ ನೀಡುವದಾದರೆ, ನಿಮ್ಮ ಅಂಗಡಿಯನ್ನು ಹೊಸತಾಗಿ ನಿರ್ಮಿಸಲು ಕಾರ್ಟಾಕ್ಟರ್ ಗುಂಡಪ್ಪ ಎಂಬಾತನಿಗೆ ಗುತ್ತಿಗೆ ನೀಡಿದ್ದಿರಿ ಎಂದು ತಿಳಿಯಿರಿ ಕಾಂರ್ಟಾಕ್ಟ ಹಣವಾಗಿ ನೀವು ಆತನಿಗೆ ತುಂಬಾ ಹಣವನ್ನೇನೊ ನಗದು ರೂಪದಲ್ಲಿ ನೀಡಿರುತ್ತಿರಿ, ಆದರೆ ಈ ಜಿಪುಣ ಗುಂಡಪ್ಪ ನಿಮ್ಮಿಂದ ಪಡೆದ ಹಣದ ಬಗ್ಗೆ ಆತನ ವಾರ್ಷಿಕ ಲೆಕ್ಕಪತ್ರದಲ್ಲಿ ಕಾಣಿಸದೆ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿ ಬಿಟ್ಟನೆಂದು ತಿಳಿಯಿರಿ, ಆಗ ಸರ್ಕಾರಕ್ಕೆ ಅಷ್ಟರಮಟ್ಟಿಗೆ ತೆರಿಗೆ ನಷ್ಟವಾಗುವದಲ್ಲದೆ ಈ ಗುಂಡಪ್ಪನನ್ನ ನೋಡಿ ನಾಳೆ ಮರಿಯಪ, ನಾಡಿದ್ದು ಮತ್ತೊಬ್ಬ ಹೀಗೆ ಎಲ್ಲರು ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುವವರೆ ಆಗಿ ಬಿಡುತ್ತಾರಲ್ಲವೆ!? ನೀವೆ ಹೇಳಿ ಸ್ವಾಮಿ ಎಷ್ಟು ಮಂದಿ ಇರತಾರೆ ಪ್ರಾಮಾಣಿಕವಾಗಿ ತೆರಿಗೆ ಕಟ್ತೀವಿ ಅನ್ನೋರು....... ನಮ್ಮ ನಿಮ್ಮಂತಾ ಒಂದಷ್ಟು ಮಂದಿ ಪ್ರಾಮಾಣಿಕರನ್ನ ಬಿಟ್ರೇ.!!!

ಹೀಗಾಗಿಯೆ ಸರ್ಕಾರ ಒಂದು ಹೊಸಾ ಉಪಾಯಮಾಡಿದೆ. ಅದೇನು ಅಂದ್ರೆ ನಾವ ನೀವಂತು ತುಂಬಾ ಪ್ರಾಮಾಣಿಕರಿದಿವಿ ಹಾಗಾಗಿ ಗುಂಡಪ್ಪನಿಗೆ ರೊಖ್ಖ ಕೊಡೊಮೊದಲು ಸರ್ಕಾರದ ಬಾಬ್ತು ಹಿಡಿದು ಕೊಟ್ ಬಿಟ್ರೆ ಬಿತ್ತಲ್ಲ ಗುಂಡಪ್ಪನಿಗೆ ಮುಗುದಾಣ ಅಂತ ಹೇಳಿ ನಮಗೆ ಒಂದು ಕೆಲಸಾ ಒಪ್ಪಿಸಿದ್ದಾರೆ.

ಕಾಂರ್ಟಾಕ್ಟರ್ ಗುಂಡಪ್ಪ ಇಲ್ಲಿ ಒಬ್ಬ ಸಾಂದರ್ಭಿಕ ವ್ಯಕ್ತಿ ಮತ್ತು ಸನ್ನಿವೇಶಕ್ಕೆ ಸ್ವಲ್ಪ ಹಾಸ್ಯ ಬೆರೆತರೆ ಉತ್ತಮ ಎಂದು ಬಳಸಿಕೊಂಡ ಪಾತ್ರವಷ್ಟೆ; ತೆರಿಗೆಯ ವಿಚಾರ ಬಂದಾಗ ಒಂದಿಲ್ಲೊಂದು ಕಾರಣಕ್ಕೆ ನಮ್ಮಲ್ಲಿಯೇ ಗುಂಡಪ್ಪ ಉದ್ಭವವಾದರು ಆಶ್ಚರ್ಯವಿಲ್ಲ, ನನ್ನ ನಿಮ್ಮಂನ್ನು ಒಳಗೊಂಡಂತೆ ಎಲ್ಲರಿಂದಲೂ ಸರ್ಕಾರಕ್ಕೆ ತೆರಿಗೆಯ ವಿಚಾರವಾಗಿ ಟೋಪಿ ಬಿದ್ದರೆ ಆಶ್ಚರ್ಯ ಪಡಬೇಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆ ಕಡಿತದ ಯೋಜನೆಯನ್ನು ತರುವಂತದ್ದು ಸರ್ಕಾರದ ಪಾಲಿಗೆ ಅನಿವಾರ್ಯವಾದ ಕೆಲಸವಾಗಿತ್ತು

ಮೇಲೆ ವಿವರಿಸಿದಂತ ಸಾಕಷ್ಟು ಸನ್ನಿವೇಶಗಳು ಇರುತ್ತವೆ. ಅಲ್ಲೆಲ್ಲ ಒಬ್ಬಾತ ಹಣವನ್ನು ಪಾವತಿಸಿದ್ದೇನೆ ಎಂದು ಲೆಕ್ಕ ಬರೆದರೆ ಮತ್ತೊಬ್ಬಾತ ತನಗೆ ಆ ಹಣ ಬಂದ ಬಗ್ಗೆ ಯಾವುದೇ ಮಾಹಿತಿಯನ್ನೆ ನೀಡದೆ ಸರ್ಕಾರದ ತೆರಿಗೆಗೆ ಟೋಪಿ ಹಾಕಿ ಬಿಡುತ್ತಾನೆ. ಕಾರಣ ಹಣ ಪಾವತಿ ಮಾಡುವವನಿಗೆ ತೆರಿಗೆಯನ್ನ ಮುರಿದು ಸರ್ಕಾರಕ್ಕೆ ಕಟ್ಟುವಂತೆ ಕೆಲಸ ಒಪ್ಪಿಸಿದರೆ ಇಬ್ಬರಲ್ಲಿ ಒಬ್ಬ ಪ್ರಾಮಾಣಿಕರಿದ್ದರು ಸಾಕು ಸರ್ಕಾರಕ್ಕೆ ತೆರಿಗೆ ಬಂದು ತಲುಪುತ್ತದೆ, ಎಂದು ಯೋಚಿಸಿ ಈ ತೆರಿಗೆ ಕಡಿತವನ್ನ ಯೋಜನೆಯನ್ನ ಆರಂಭಿಸಿದ್ದಾರೆ, ಸರ್ಕಾರದವರು.

ಹಾಗೆಂದು ನೀವು ಅಂಗಡಿಗೆ ಹೊಗಿ ೧೦ ರೂಪಾಯಿ ಚಾಕಲೇಟ್ ತರುವ ಮೊದಲೋ, ಹೋಟೆಲಿಗೆ ಹೊಗಿ ೫ ರೂಪಾಯಿ ಚಹ ಕುಡಿದು ಬರುವಾಗಲೋ ಅಂಗಡಿಯವನಿಗೆ ಅಥವಾ ಹೋಟೆಲಿನವನಿಗೆ ಕೊಡುವ ಹಣದಲ್ಲಿ ತೆರಿಗೆ ಮುರಿದು ಸರ್ಕಾರಕ್ಕೆ ಕಟ್ಟಿ ಎಂದರೆ ಪ್ರಾಯೋಗಿಕವಾಗಿ ಇದು ಸಾಧ್ಯವಾಗು ಕೆಲಸವೆ? ಇಲ್ಲ ಅಲ್ಲವೆ ಹಾಗಾಗಿ ಕೆಲವೊಮ್ಮೆ ಸಣ್ಣ ಪುಟ್ಟ ಮೀನುಗಳನ್ನ ಹಾಗೆಯೇ ಬಿಡಬೇಕಾಗುತ್ತದೆ.

ಹಾಗಾಗಿ ಎಲ್ಲೆಲ್ಲಿ ಪ್ರಾಯೊಗಿಕವಾಗಿ ಸಾಧ್ಯವೋ ಮತ್ತು ತೆರಿಗೆ ಕಡಿತ ಗೊಳಿಸುವವನಿಗೆ ತೆರಿಗೆ ಕಡಿತ ಗೊಳಿಸಿ ಸರ್ಕಾರಕ್ಕೆ ಕಟ್ಟುವದು ಅತೀ ದೊಡ್ದ ಹೊರೆಯಾಗದಂತೆ ಯಾಕೆಂದರೆ ತೆರಿಗೆ ಕಡತದ ಗೊಳಿಸಿ ಸರ್ಕಾರಕ್ಕೆ ಸಲ್ಲಿಸುವದು ಎಷ್ಟೇ ಆದರು ಒಂದು ಹೊರೆಯೆ ಸರಿ. ಆದರೆ ಆತನ ಮೂಲ ಉದ್ಯೋಗಕ್ಕೆ ತೀರಾ ತೊಂದರೆಯಾಗದಂತೆ ನಿರ್ವಹಿಸಬಹುದಾದಂತೆ ಕಾನೂನು ರೂಪಿಸಿ ಜವಾಬ್ದಾರಿಯನ್ನ ವಹಿಸಿದೆ. ಹಾಗಾಗಿ ಎಲ್ಲರೂ ತೆರಿಗೆ ಕಡಿತಗೊಳಿಸಿಬೇಕೆಂದಿಲ್ಲ ಮತ್ತು ಎಲ್ಲರಿಗೆ ನೀಡುವ ಹಣದಲ್ಲೂ ತೆರಿಗೆ ಕಡಿತ ಗೊಳಿಸಬೇಕೆಂದಿಲ್ಲ.

ನಮ್ಮವರೋ ಅತ್ತಲಿನ ಕಡ್ದಿಯನ್ನ ಎತ್ತಿ ಇತ್ತ ಇಡುವದಕ್ಕೆ ಎನು ಸಿಗುತ್ತದೆ ಎಂದು ಆಲೋಚಿಸುವವರು. ಹೀಗಿರುವಾಗ ಸರ್ಕಾರ ಹೇಳಿತೆಂದು ಅಷ್ಟು ಸುಲಭವಾಗಿ ಲಾಭವಿಲ್ಲದೆ ಕೆಲಸವನ್ನ ಶ್ರದ್ದೆಯಿಂದ ನಿರ್ವಹಿಸಿ ಬಿಡುತ್ತಾರೆಯೆ.? ಅದಂತು ಅಸಾಧ್ಯ. ಹಾಗೆಂದು ತೆರಿಗೆ ಕಡಿತ ಗೊಳಿಸಿ ಕಟ್ಟುವವರಿಗೆ ಸಂಗ್ರಹಿಸಿದ ತೆರಿಗೆಯ ಆಧಾರದ ಮೇಲೆ ಕಮೀಷನ್ ಕೊಟ್ಟರೆ ಮೊದಲನೆಯದಾಗಿ ಸರ್ಕಾರ ಅನಾವಶ್ಯಕ ನಷ್ಟ ಅನುಭವಿಸುತ್ತದೆ. ಅಲ್ಲದೆ ಇತ್ತ ಕಮಿಷನ್ ಆಸೆಗೆ ಕಂಡಕಂಡವರಿಂದೆಲ್ಲ ಟ್ಯಾಕ್ಸ ಕಡಿತಗೊಳಿಸಲು ಆರಂಭಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅಂತೂ ಈ ಎಲ್ಲ ಗೊಂದಲವನ್ನ ಯೋಚಿಸಿದ ಸರ್ಕಾರ ಒಪ್ಪಿಸಿದ ಕೆಲಸ ಸರಿಯಾಗಿ ಮಾಡದಿದ್ದರೆ ದಂಡಹಾಕುವ ನಿರ್ಧಾರಕ್ಕೆ ಬಂದು, ಯಾರು ತೆರಿಗೆ ಕಡಿತ ಗೊಳಿಸಿ ಸರ್ಕಾರಕ್ಕೆ ಕಟ್ಟ ಬೇಕಿತ್ತೊ ಅವರು ಆ ಕೆಲಸವನ್ನ ನಿರ್ವಹಿಸದಿದ್ದರೆ ತಪ್ಪಿಗನುಸಾರವಾಗಿ ದಂಡವನ್ನ ವಿಧಿಸುವ ಕಾನೂನನ್ನು ರೂಪಿಸಿತು. ಈ ಮೂಲಕ ಲಾಭವಿಲ್ಲದಿದ್ದರು ಹೋಗಲಿ ದಂಡ ಬಿಳದಿದ್ದರೆ ಸಾಕಪ್ಪಾ ಎಂದಾದರು ವಹಿಸಿದ ಕೆಲಸ ಸರಿಯಾಗಿ ಮಾಡುತ್ತಾರೆಂಬುದು ಸರ್ಕಾರದ ನಂಬಿಕೆ.

ಇಗ ನಿಮ್ಮಲ್ಲಿ ಕಡಿಮೆ ಅಂದರು ಹಾಗೇ ಸುಮಾರು ಪ್ರಶ್ನೆ ಉದ್ಭವವಾಗಿದೆ ಅಲ್ಲವೆ ಅವು ಯಾವುವು ಅಂದರೆ

15. ಹಾಗಾದರೆ ಯಾರು ಟ್ಯಾಕ್ಸ ಕಡಿತ ಗೊಳಿಸುವ ಜವಾಬ್ದಾರಿ ಹೊಂದಿದ್ದಾರೆ? ಎಂಬುದು ಮೊದಲನೆಯದು.

ಉತ್ತರ: ಮೊದಲನೆಯದಾಗಿ ಮೇಲೆ ಹೇಳಿದ್ದೆನಲ್ಲ, ವ್ಯಕ್ತಿ ಎಂಬ ಶಬ್ದಕ್ಕೆ ವಿಶಾಲಾರ್ಥವಿದೆ ಎಂದು, ನೋಡಿ ಈ ಕೆಳಗೆ ಹೇಳಿರುವ ಏಳು ವಿಧಗಳು ಆದಾಯ ತೆರಿಗೆ ಕಾನೂನಿನನ್ವಯ ವ್ಯಕ್ತಿಗಳೇ. ಕನ್ನಡ ಮತ್ತು ಇಂಗ್ಲಿಷ್ ಎರಡು ಹೆಸರನ್ನು ನೀಡಿದ್ದೆನೆ.

1

ಏಕ ವ್ಯಕ್ತಿ

An individual

೧ ನೇಯ ವರ್ಗ

2

ಅವಿಭಾಜಿತ ಹಿಂದೂ ಕುಟುಂಬ

A Hindu Undivided Family (HUF)

3

ಕಂಪನಿ

A Company

ಎರಡನೆಯ ವರ್ಗ

4

ಪಾಲುದಾರಿಕೆ ಸಂಸ್ಥೆ

A Partnership firm

5

ವ್ಯಕ್ತಿಗಳ ಸಮೂಹ, ಏಕವ್ಯಕ್ತಿಗಳ ಸಮೀತಿ (ದಾನ-ದತ್ತಿಗಳು ಅಥವಾ ಟ್ರಷ್ಟಗಳು ಸಹ ಈ ಗುಂಪಿನಲ್ಲೆ ಒಳಗೊಳ್ಳುತ್ತವೆ)

An association of Person, Body of Individual whether incorporated or not ( It includes trust also)

6

ಎಲ್ಲಾ ರೀತಿಯ ಕಾನೂನು ನಿರ್ಮಿತ ಅಸ್ವಾಭಾವಿಕ ವ್ಯಕ್ತಿಗಳು.

A local authority

7

ಸ್ಥಾನಿಕ ಸರ್ಕಾರಗಳು (ಗ್ರಾಮ,ತಾಲೂಕು, ಜಿಲ್ಲಾ ಪಂಚಾಯತಿಗಳು, ಮುನ್ಸಿಪಾರ್ಟಿಗಳು ಇತ್ಯಾದಿ)

Every artificial judicial person, not falling within any of the preceding sub-clauses.

ಇವುಗಳಲ್ಲಿ ಮೇಲೆ ಹೇಳಿದ ಮೊದಲ ಎರಡು ವಿಧದ ವ್ಯಕ್ತಿಗಳಿಗೆ ಆ ವ್ಯಕ್ತಿಗಳು ಆದಾಯ ತೆರಿಗೆ ಕಾನೂನಿನನ್ವಯ ಲೆಕ್ಕಪರಿಶೋಧನೆಗೆ ಒಳಪಡುವಂತಹವರಾದರೆ ಮಾತ್ರ ಅವರು ಬೇರೆಯವರಿಗೆ ಪಾವತಿಸುವ ಹಣದ ಮೇಲೆ ತೆರಿಗೆ ಕಡಿತ ಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಉಳಿದಂತೆ ೫ ವಿಧದ ವ್ಯಕ್ತಿಗಳಿಗೆ ಈ ವಿನಾಯತಿಯನ್ನು ನೀಡಿಲ್ಲ, ಕಾರಣ ಈ ಐದು ವಿಧದ ವ್ಯಕ್ತಿಗಳು ಆದಾಯ ತೆರಿಗೆ ಕಾನೂನಿನನ್ವಯ ಲೆಕ್ಕಪರಿಶೋಧನೆಗೆ ಒಳಪಡದಿದ್ದರು, ಸಹ ಈ ಜವಾಬ್ದಾರಿ ಅವರ ಮೇಲೆ ಇದ್ದೇ ಇದೆ ಮತ್ತು ಜವಾಬ್ದಾರಿ ನಿರ್ವಹಣೆಯಲ್ಲಿನ ಲೋಪದೋಷಗಳಿಗೆ ಸೂಕ್ತದಂಡವು ಇದೆ.

16. ಈಗ ಯಾರು ತೆರಿಗೆ ಕಡಿತ ಗೋಳಿಸಬೇಕೆಂಬುದು ಸ್ಪಷ್ಟವಾಯಿತು ಆದರೆ ಹಣ ಪಾವತಿಸುವ ಮೊದಲು ಯಾರಿಂದ ಎಷ್ಟು ತೆರಿಗೆಯನ್ನು ಕಡಿತ ಗೋಳಿಸಬೇಕೆಂಬುದು ತಿಳಿಸಿ.

ಉತ್ತರ: ತೆರಿಗೆ ಕಡಿತವನ್ನು ವಾರ್ಷಿಕವಾಗಿ ಅಥವಾ ಒಂದು ಕಂತಿನಲ್ಲಿ ಒಬ್ಬ ವ್ಯಕ್ತಿಗೆ ಪಾವತಿಸಿದ ಹಣದ(ನಗದು ಮಾತ್ರವಲ್ಲ) ಮೊತ್ತದ ಮಿತಿಯ ಆಧಾರದ ಮೇಲೆ ಮಾಡಲಾಗುತ್ತದೆ.

ಹಣವನ್ನು ಪಾವತಿಸುವವನು ಈ ಮೇಲೆ ಹೇಳಿದ ಯಾವುದೇ ವಿಧದ ವ್ಯಕ್ತಿಯು ಸಹ ಆಗಿರಬಹುದು. ಮೇಲೆ ಹೇಳಿದಂತೆ ಆತನ ಜವಾಬ್ದಾರಿಗನುಗುಣವಾಗಿ ತೆರಿಗೆಯನ್ನು ಕಡಿತ ಮಾಡುವ ಸಂದರ್ಭದಲ್ಲಿ ಸಹ ಒಂದು ಅಂಶವನ್ನು ಗಮನಿಸಬೇಕು, ಅದೇನೆಂದರೆ ಪಾವತಿಸಿದ ಹಣ ಪಡೆಯುವವನು ಯಾರು, ಅಂದರೆ ಮೇಲೆ ಹೇಳಿದ ಯಾವ ವಿಧದ ವ್ಯಕ್ತಿಗೆ ಹಣ ಪಾವತಿ ಮಾಡಲಾಗುತ್ತಿದೆ ಎಂಬುದರ ಮೇಲೆ ಆತನಿಂದ ತೆರಿಗೆಯನ್ನು ಕಡಿತ ಗೋಳಿಸುವ ಪ್ರಮಾಣದಲ್ಲಿ ಮತ್ತೆ ವ್ಯತ್ಯಾಸ ಮಾಡಲಾಗಿದೆ. ನೋಡಿ ಸ್ವಾಮಿ ಇಲ್ಲಿ ಸಹ ಮೇಲೆ ಹೇಳಿದ ಮೊದಲೆರಡು ವಿಧದ ವ್ಯಕ್ತಿಗಳದೆ ಮೇಲುಗೈ. ಪಾಪಾ ನೋಡಿ ಸ್ವಾಮಿ ಉಳಿದೈದು ವ್ಯಕ್ತಿಗಳ ಪಾಡನ್ನಾ ಇತ್ತ ಲೆಕ್ಕಪರಿಶೋಧನೆಗೆ ಒಳಪಡದಿದ್ದರು ಸಹ ಅವರು ಪಾವತಿಸುವ ಹಣದ ಮೇಲೆ ತೆರಿಗೆ ಕಡಿತ ಗೋಳಿಸಬೇಕು, ಅತ್ತ ಅವರಿಗೆ ಯಾರಾದರು ಪಾವತಿ ಮಾಡುವಾಗಲು ಸಹ ಅವರಿಂದ ಮೊಡಲೆರಡು ವ್ಯಕ್ತಿಗಳಿಗಿಂತ ಹೆಚ್ಚಿನ ತೆರಿಗೆ ಕಿತ್ತುಕೊಂಡು ಉಳಿದ್ದನ್ನ ಪಾವತಿ ಮಾಡಲಾಗುತ್ತದ್ದೆ. ಏನ್ ಮಾಡೋದ್ ಹೇಳಿ ಎಲ್ಲಾ ಹಣೆ ಬರಹ.

untitled.bmp

(ಟೇಬಲ್ ಸಂಖ್ಯೆ ೧)

ಮೇಲಿನ ಅಂಕಿಅಂಶಗಳನ್ನು ಅರ್ಥಮಾಡಿಕೊಳ್ಳುವದು ಸ್ವಲ್ಪ ಕಷ್ಟವೆಂದನಿಸುತ್ತಿದೆಯಾ ಇರಲಿ ನೋಡೋಣ ಒಂದೆರಡು ಚಿಕ್ಕ ಕಾಲ್ಪನಿಕ ಸನ್ನಿವೇಶವನ್ನು ಹೇಣೆದರೆ ಅರ್ಥಸುಲಭವಾಗಬಹುದು:

ಸನ್ನಿವೇಶ ೧:

ತೋಪಣ್ಣಪ್ಪನವರು ಸಿರಸಿಯ ಪ್ರಸಿದ್ಧ ಹಾಗೂ ಒಬ್ಬ ದೊಡ್ಡ ಅಡಿಕೆ ಇತ್ಯಾದಿ ಕೃಷಿ ಉತ್ಪನ್ನಗಳ ವ್ಯಾಪಾರಿಯೆಂದು ಭಾವಿಸಿ, ತೊಪಣ್ಣಪ್ಪನವರು ಮೇಲೆ ಹೇಳಿದ ಮೊದಲೆರಡು ವಿಧದ ವ್ಯಕ್ತಿಗಳ ಸಾಲಿನಲ್ಲಿ ಸೇರುತ್ತಾರೆ ಎಂದು ತಿಳಿಯಿರಿ ಮತ್ತು ಅವರು ದೊಡ್ಡ ವರ್ತಕರಾದಕಾರಣ ಅವರ ಲೆಕ್ಕಪತ್ರಗಳು ಅಡಿಟ್ (ಲೆಕ್ಕಪರಿಶೊಧನೆ) ಆಗುತ್ತವೆ ಎಂದು ತಿಳಿಯಿರಿ. ಅವರು ಈ ವರ್ಷ ಪಾವತಿಸಿದ ಪಾವತಿಯ ಕೆಲವು ವಿವರವನ್ನು ಮತ್ತು ಅದಕ್ಕನುಗುಣವಾಗಿ ತೆರಿಗೆ ಕಡಿತ ಗೊಳಿಸಿದ ವಿವರಗಳು ನೀಡಿದ್ದೇನೆ.

1. ತೊಪಣ್ಣಪ್ಪನವರು ಹುಬ್ಬಳ್ಳಿಯ ಝುಗ್ಗಪ್ಪಯ್ಯ ಫೈನಾಸ್ಸ ಪ್ರೈವೆಟ ಲಿಮಿಟೆಡ್ ಕಂಪನಿಯಿಂದ (ಈ ಕಂಪನಿ ಮೇಲೆ ಹೇಳಿದ ಉಳಿದೈದು ವಿಧದ ವ್ಯಕ್ತಿಗಳಸಾಲಿನಲ್ಲಿ ಸೇರುತ್ತದೆ) ಸಾಲ ಪಡೆದಿರುತ್ತಾರೆ ಅವರಿಗೆ ಸಾಲದ ಮೇಲಿನ ಬಡ್ಡಿ ಮೊತ್ತವನ್ನು ಪಾವತಿಸುವಾಗ ವಾರ್ಷಿಕ ಬಡ್ಡಿ ರೂ.೫೦೦೦ ಮಿರಿದರೆ ೧೯೪ ಎ ಅನ್ವಯ ಒಟ್ಟೂ ಪಾವತಿಸುವ ಬಡ್ಡಿಯ ಮೊತ್ತದಲ್ಲಿ ೧೦% ಕಡಿತಮಾಡಿ ಸರ್ಕಾರಕ್ಕೆ ಕಟ್ಟಬೇಕು.

2. ತೊಪಣ್ಣಪ್ಪನವರು ಗೋಪಣ್ಣಪ್ಪ ಎಂಬ ದಲಾಲಿಯನ್ನು ಗೊತ್ತುಪಡಿಸಿ ಉತ್ತರ ಕರ್ನಾಟಕದ ಕಡೆ ವ್ಯಾಪಾರ ಕುದುರಿಸಲು ನೇಮಿಸಿ ಕೊಂಡಿರುತ್ತಾರೆ ಎಂದು ತಿಳಿಯಿರಿ. ಅಂತಹ ಸಂದರ್ಭದಲ್ಲಿ ಆತನಿಗೆ ವಾರ್ಷಿಕ ರೂ ೫೦೦೦ಕ್ಕಿಂತ ಹೆಚ್ಚಿನ ಮೊತ್ತದ ದಲ್ಲಾಳಿ ಪಾವತಿಸಿದಾಗ ೧೯೪ ಎಚ್ ಅನ್ವಯ ಒಟ್ಟು ಪಾವತಿಸುವ ದಲ್ಲಾಳಿಯ ಮೇಲೆ ೧೦% ತೆರಿಗೆ ಮುರಿದು ಸರ್ಕಾರಕ್ಕೆ ಕಟ್ಟಬೇಕು.

3. ತೋಪಣ್ಣಪ್ಪನವರು ಧಾರವಾಡದ ಮೇ|| ಮಣ್ಣಗಡಗಿ ಎಂಡ್ ಕಂಪನಿ ಚಾರ್ಟರ್ಡ ಅಕೌಂಟ್ ಎಂಬ ಪಾಲುದಾರಿಕೆ ಕಂಪನಿಯವರಿಂದ ಅವರ ವಾರ್ಷಿಕ ಲೆಕ್ಕಪತ್ರ ಆಡಿಟ್ ಮಾಡಿಸುತ್ತಾರೆ ಎಂದು ತಿಳಿಯಿರಿ. ಅಂತಹ ಸಂರ್ಬದಲ್ಲಿ ಮೆ|| ಮಣ್ಣಗಡಗಿಯವರು ಒಟ್ಟು ಅವರ ಎಲ್ಲಾ ಸೇವಾ ಶುಲ್ಕ ಸೇರಿಸಿ ವಾರ್ಷಿಕ ರೂ ೩೦,೦೦೦ ಕ್ಕಿಂತ ಹೆಚ್ಚು ಬಿಲ್ ಮಾಡಿದರೆ ಅಂತಹ ಸಮಯದಲ್ಲಿ ಅವರಿಗೆ ಕೊಡುವ ಮೊತ್ತದಲ್ಲಿ ೧೦% ಟಿ.ಡಿ.ಎಸ್ ಮಾಡಬೇಕು.

ಒಂದು ಪಕ್ಷ ತೋಪಣ್ಣಪ್ಪನವರು ವಕೀಲರಿಗೋ, ಇಂಜಿನಿಯರಿಗೋ, ಹೀಗೆ ಯಾವದೇ ವೃತ್ತಿಪರರಿಗೆ ವಾರ್ಷಿಕ ೩೦೦೦೦ ಸಾವಿರ ಕ್ಕಿಂತ ಹೇಚ್ಚು ಪಾವತಿಸಿದರೆ ಟಿ.ಡಿ.ಎಸ್. ಮಾಡಬೇಕು.

4. ತೋಪಣ್ಣಪ್ಪನವರು ಹೊಸತಾದ ಅಡಿಕೆ ಮಂಡಿಯನ್ನ ಕಟ್ಟುವ ಸಲುವಾಗಿ ಇಸ್ಮಾಯಿಲ್ ಸಾಹೆಬ್ ಅವರಿಗೆ ಗುತ್ತಿಗೆ ಕೊಡುತ್ತಾರೆ ಎಂದು ತಿಳಿಯಿರಿ ( ಇಸ್ಮಾಯಿಲ್ ಸಾಹೆಬ್ರು ಮೊದಲ ಗುಂಪಿನ ವ್ಯಕ್ತಿಯೆನೊ ಹೌದು ಆದರೆ ಗಮನಿಸಿ, ಯಾವಕಾರಣಕ್ಕು ಮೊದಲ ಗುಂಪಿನ ಅವಿಭಾಜಿತ ಹಿಂದೂ ಕುಟುಂಬವಂತೂ ಆಗಲು ಸಾಧ್ಯವಿಲ್ಲ.)

ತೋಪಣ್ನಪ್ಪನವರು ಸಾಹೇಬರಿಗೆ ಕೆಲಸ ಕೊಡುವ ಹೊತ್ತಿಗಾಗಲೆ ಮಾರ್ಚ ೧೫ ಆಗಿತ್ತು. ಆದರೂ ಚುರುಕು ಕೆಲಸದವರಾದ ಸಾಹೇಬ್ರು ರೂ ೫೦೦೦೦ ಮೊತ್ತದ ಕೆಲಸವನ್ನಾಗಲೆ ೩೧-೦೩ರ ಒಳಗೆ ಮುಗಿಸಿ ಹಣವನ್ನು ಪಡೆದಾಗಿತ್ತು, ಕಾರಣ ಇಲ್ಲಿ ತೋಪಣ್ಣಪ್ಪನವರು ಮೇಲಿನ ೧೯೪ ಸಿ ಯ ಎರಡನೆಯ ಕಾಲಂನ ಅನ್ವಯ ಒಟ್ಟು ಪಾವತಿಯ ಮೊತ್ತದ ಮೇಲೆ ೧% ಟಿ.ಡಿ.ಎಸ್ ಮಾಡಬೇಕು.

ಮುಂದಿನ ವರ್ಷ ಸಾಹೇಬರು ಪುರ್ಣ ಕೆಲಸ ಮುಗಿಸಿ ೪೫೦೦೦೦ ರೂ ಪಡೆಯುತ್ತಾರೆ. ಅಂತಹ ಸಮಯದಲ್ಲಿ ಸಹ ೧೯೪ ಸಿ ಯ ಮತ್ತೊಂದು ನಿಯಮ ಅನ್ವಯವಾಗುತ್ತದೆ. ಹಾಗಾಗಿ ಟಿ.ಡಿ.ಎಸ್ ಮಾಡಬೇಕು. ಆದರೆ ಅದು ಮುಂದಿನ ಆರ್ಥಿಕ ವರ್ಷಕ್ಕೆ ಸಂಬಂದ ಪಡುತ್ತದೆ. ( ಇಸ್ಮಾಯಿಲ್ ಸಾಹೆಬ್ರು ಮೊದಲ ಗುಂಪಿನ ವ್ಯಕ್ತಿಯೆನೊ ಹೌದು ಆದರೆ ಗಮನಿಸಿ, ಯಾವಕಾರಣಕ್ಕು ಮೊದಲ ಗುಂಪಿನ ಅವಿಭಾಜಿತ ಹಿಂದೂ ಕುಟುಂಬವಂತೂ ಆಗಲು ಸಾಧ್ಯವಿಲ್ಲ.)

5. ತೋಪಣ್ಣಪ್ಪನವರ ಒಂದು ಅಡಿಕೆಮಂಡಿಯ ಕಟ್ಟಡವು ಬಾಡಿಗೆಯದಾಗಿದ್ದು, ವಾರ್ಷಿಕ ರೂ ೧೮೦೦೦೦ಕ್ಕಿಂತ ಹೆಚ್ಚು ಬಾಡಿಗೆಯನ್ನು ಅದರ ಮಾಲಿಕರಾದ ಶಂಭಂಭಟ್ಟರಿಗೆ ನೀಡುತ್ತಾರೆ ಎಂದು ತಿಳಿಯಿರಿ. ಅಂಥಹ ಸಂದರ್ಬದಲ್ಲಿ ಭಟ್ಟರಿಗೆ ಹಣ ಪಾವತಿಸುವ ಮೊದಲು ೧೯೪ ಐ ಅನ್ವಯ ಪಾವತಿಸುವ ಹಣದಲ್ಲಿ ೧೦% ತೆರಿಗೆ ಮುರಿದ ನಂತರವೆ ಪಾವತಿ ಮಾಡಬೇಕು. (ಇಲ್ಲಿ ಶಂಭಾಭಟ್ಟರು ಮನೆಯ ಯಜಮಾನ ಎಂದು ತಿಳಿದರೆ ಅವರು ಬಾಡಿಗೆ ನೀಡಿದ ಕಟ್ಟಡ ಭಟ್ಟರ ಅವಿಭಾಜಿತ ಹಿಂದೂ ಕುಟುಂಬದ ಅಸ್ತಿಯೆಂದು ತಿಳಿದರೆ ಇಲ್ಲಿ ಭಟ್ಟರನ್ನು ಕಾಯಿದೆಯನ್ವಯ ಕರ್ತ ಎಂದು ಕರೆಯಲಾಗುತ್ತದೆ. ಇದನ್ನು ಅವಿಭಾಜಿತ ಹಿಂದೂ ಕುಟುಂಬ ಎಂದು ಕರೆಯುತ್ತಾರೆ. ಕಾನೂನಿನನ್ವಯ ಸಂಪೂರ್ಣ ಕುಟುಂಬ ಒಟ್ಟೂ ಸೇರಿ ಒಂದು ಪ್ರತ್ಯೇಕ ವ್ಯಕ್ತಿಯಾಗಿರುತ್ತದೆ.) (ಇಲ್ಲಿ ಶಂಭಾಭಟ್ಟರು ಮನೆಯ ಯಜಮಾನ ಎಂದು ತಿಳಿದರೆ ಅವರು ಬಾಡಿಗೆ ನೀಡಿದ ಕಟ್ಟಡ ಭಟ್ಟರ ಅವಿಭಾಜಿತ ಹಿಂದೂ ಕುಟುಂಬದ ಅಸ್ತಿಯೆಂದು ತಿಳಿದರೆ ಇಲ್ಲಿ ಭಟ್ಟರನ್ನು ಕಾಯಿದೆಯನ್ವಯ ಕರ್ತ ಎಂದು ಕರೆಯಲಾಗುತ್ತದೆ. ಇದನ್ನು ಅವಿಭಾಜಿತ ಹಿಂದೂ ಕುಟುಂಬ ಎಂದು ಕರೆಯುತ್ತಾರೆ. ಕಾನೂನಿನನ್ವಯ ಸಂಪೂರ್ಣ ಕುಟುಂಬ ಒಟ್ಟೂ ಸೇರಿ ಒಂದು ಪ್ರತ್ಯೇಕ ವ್ಯಕ್ತಿಯಾಗಿರುತ್ತದೆ.

ತಾವು ಟೇಬಲ್ ಸಂಖ್ಯೆ ೧ ರಲ್ಲಿ ಗಮನಿಸಬಹುದು ಕೊನೆಯಲ್ಲಿ ೬ ನೇಯ ಸಾಲಿನಲ್ಲಿ ಪಾನ್ ಸಂಖ್ಯೆ ನೀಡದಿದ್ದವರು ಅಥವಾ ತಪ್ಪು ಪಾನ್ ನೀಡಿದವರು ಎಂದು ಬರೆದಿದೆ. ಆ ವರ್ಗದವರಿಗೆ ಎಲ್ಲಗಿಂತಲೂ ಅಧಿಕ ಅಂದರೆ ೧೦೦ರಲ್ಲಿ ೨೦ರಷ್ಟು ತೆರಿಗೆಯನ್ನು ಕಡಿತಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲಿ ತಾವು ಈ ಪುಸ್ತಕದಲ್ಲಿನ ಪಾನ್ ಕಾರ್ಡ ಬಗೆಗಿನ ಅಧ್ಯಾಯದಲ್ಲಿ ತಪ್ಪು ಪಾನ್ ನೀಡಿದರೆ ಅಥವಾ ಪಾನ್ ನೀಡದಿದ್ದರೆ ಆಗುವ ತೊಂದರೆಯ ಬಗ್ಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು.

ಇಲ್ಲಿ ಇನ್ನೊಂದು ಅಂಶವನ್ನು ಸಹ ಗಮನಿಸ ಬೇಕು. ಅದೇನೆಂದರೆ ಮೊದಲನೆಯದು ಹೆಚ್ಚಿನ ದರದಲಿ ತೆರಿಗೆ ಕಡಿತ ಗೊಳ್ಳುವುದಾದರೆ ಇನ್ನೊಂದು ತಪ್ಪು ಪಾನ್ ನೀಡುವಿಕೆ ಅಥವಾ ಪಾನ್ ನೀಡದೆ ಇರುವಿಕೆಯಿಂದ ಕಡಿತ ಮಾಡಿದ ತೆರಿಗೆ ಕೂಡ ನಿಮ್ಮ ಆದಾಯ ತೆರಿಗೆ ಖಾತೆ (ಪಾನ್) ಗೆ ಜಮಾವಣೆಯಾಗದೆ ಸಂಪೂರ್ಣವಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಸನ್ನಿವೇಶ ೨:

ಬ್ಯಾಡಗಿಯಲ್ಲಿ ಹೊಸದಾಗಿ ಆರಂಭವಾದ ಮೆಣಸಿನಕಾಯಿ ವ್ಯಾಪಾರದ ಕಂಪನಿ ದಗಲಬಾಜಿ ಪ್ರೈವೇಟ್ ಲಿಮಿಟೆಡ್, ಮೇಲೆ ವಿವರಿಸಿದ ವ್ಯಕ್ತಿಗಳ ಪಟ್ಟಿಯಲ್ಲಿ ಇವರದು ಎರಡನೆಯ ಗುಂಪು ಮತ್ತು ಇವರು ಹೊಸತಾಗಿ ವ್ಯವಹಾರ ಆರಂಭಿಸಿದವರು. ಹಾಗಾಗಿ ಹೆಚ್ಚೇನು ಈ ವರ್ಷ ವ್ಯವಹಾರ ಕುದುರಿಲ್ಲ ಕಾರಣ ಆದಾಯ ತೆರಿಗೆಯ ಆಡಿಟ್ ಮಾಡಿಸುವ ಕೆಲಸವಿಲ್ಲ. ಆದಾರೆ ಇವರು ಎರಡನೆಯ ಪಟ್ಟಿಯ ವ್ಯಕ್ತಿಗಳಲ್ಲವೆ ಹಾಗಾಗಿ ಟಿ.ಡಿ.ಎಸ್. ಮಾಡುವ ಕೆಲಸವಂತು ಇದ್ದೆಇದೆ.

1. ಮೊದಲನೆಯದಾಗಿ ಇವರು ಬೆಂಗಳೂರಿನ ಶ್ರೀ ಸುಂದರಮೂರ್ತಿ ಎಂಬ ಕಂಪನಿ ಸೆಕ್ರೇಟರಿಯವರಿಂದ ಇವರ ದಗಲಬಾಜಿ ಎಂಡ್ ಕಂಪನಿಯನ್ನು ರಜಿಷ್ಟರ್ ಮಾಡಿಸಿರುತ್ತಾರೆ. ಒಟ್ಟೂ ಶ್ರೀ ಸುಂದರಮೂರ್ತಿಯವರಿಗೆ ಸಂದಾಯವಾಗ ಬೇಕಾದ ಮೊತ್ತ ರೂ.೧೫೦೦೦೦ ಆದರೆ ಇದರಲ್ಲಿ ಹೆಚ್ಚಿನಂಶವನ್ನು ಸರ್ಕಾರಕ್ಕೆ ಕಟ್ಟಬೆಕಾದದ್ದೆ ಇದ್ದು ಸುಂದರಮೂರ್ತಿಯವರ ವೃತ್ತಿ ಶುಲ್ಕ ರೂ ೩೫೦೦೦ ಮಾತ್ರ ಅಗಿರುತ್ತದೆ ಮತ್ತು ಕಂಪನಿ ನೊಂದಾವಣೆಯ ನಂತರ ಹಣ ಪಾವತಿ ಮಾಡುತ್ತಿರುವದರಿಂದ ಶ್ರೀ ಸುಂದರಮೂರ್ತಿಯವರ ಶುಲ್ಕವನ್ನು ಪಾವತಿ ಮಾಡುವ ಮೊದಲು ೧೯೪ ಜೆ ಅನ್ವಯ ಟ್ಯಾಕ್ಸ ಕಡಿತ ಮಾಡಿಯೇ ಕೊಡಬೇಕು.

ಒಂದು ವೇಳೆ ಇಲ್ಲಿ ಒಟ್ಟೂ ಪಾವತಿಯಾದ ಮೊತ್ತ ಮೇಲೆ ಹೇಳಿದಂತೆ ೧೫೦೦೦೦ ಆಗಿದ್ದು ಕೇವಲ ರೂ.೨೫೦೦೦ ಮಾತ್ರ ಮೂರ್ತಿಯವರ ಶುಲ್ಕವಾಗಿದ್ದು ಉಳಿದದ್ದು ಸರ್ಕಾರಕ್ಕೆ ಕಟ್ಟುವ ಹಣವಾದರೆ ಇಲ್ಲಿ ಟಿ.ಡಿ.ಎಸ್. ಮಾಡ ಬೇಕೆಂದಿರಲಿಲ್ಲ. ಕಾರಣ ರೂ.೩೦೦೦೦ ಸಾವಿರದ ಒಳಗಿನ ಪ್ರೋಫೆಶನಲ್ ಫೀಯನ್ನು ವಾರ್ಷಿಕ ಒಬ್ಬ ವ್ಯಕಿಗೆ ಪಾವತಿಸಿದರೆ ಟಿ.ಡಿ.ಎಸ್ ಮಾಡಬೇಕೆಂದಿಲ್ಲ.

ಅಥವಾ ಕಂಪನಿಯನ್ನು ನೊಂದಣಿ ಮಾಡುವ ಮೊದಲೆ ಪಾವತಿಸಿದ್ದರು ಸಹ ಟ್ಯಾಕ್ಸ ಕಟ್ ಮಾಡಬೇಕೆಂದಿಲ್ಲ. ಕಾರಣ ಆಗ ಇವರು ದಗಲಬಾಜಿ ಎಂಡ್ ಕಂಪನಿಯ ಪ್ರವರ್ತಕರು ಮಾತ್ರ ಆಗಿದ್ದು ಮೇಲೆ ಹೇಳಿದ ಎರಡನೇಯ ಗುಂಪಿನ ವ್ಯಕ್ತಿಗಳಾಗಿರುವದಿಲ್ಲ.

2. ಕಂಪನಿಯ ಸಲುವಾಗಿ ಕಟ್ಟವೊಂದನ್ನ ಬಾಡಿಗೆ ಪಡೆಯುತ್ತಾರೆ, ಬಾಡಿಗೆ ಪಡೆದಕಟ್ಟಡದ ಬಾಡಿಗೆ ವಾರ್ಷಿಕ ರೂ.೨೨೫೦೦೦ ಎಂದು ಮಾತು ಮಾಡುತ್ತಾರೆ ಕಾರಣ ಪ್ರತಿ ತಿಂಗಳ ಬಾಡಿಗೆ ಪಾವತಿಸುವ ಮೊದಲು ಟಿ.ಡಿ.ಎಸ್.ಮಾಡಬೇಕು.

ªÀÄÄAzÀÄ ªÀgÉAiÀÄĪÀÅzÀÄ. . . .